ಮಾ ೨೯ ರಿಂದ ಕಲ್ಮೇಶ್ವರ ಜಾತ್ರಾ ಮಹೋತ್ಸವ

Pratibha Boi
ಮಾ ೨೯ ರಿಂದ ಕಲ್ಮೇಶ್ವರ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

ಬೆಳಗಾವಿ: ತಾಲೂಕಿನ ಚಂದನಹೊಸೂರ ಗ್ರಾಮದಲ್ಲಿ ಪ್ರತಿವರ್ಷದ ಪದ್ದತಿಯಂತೆ ರವಿವಾರ ದಿ. ೨೯ ರಿಂದ ಏಪ್ರೀಲ್ ೦೨ ರವರೆಗೆ ಐದು ದಿನಗಳ ಕಾಲ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವು ಅತಿ ವಿಜೃಂಬಣೆಯಿಂದ ಜರುಗುವುದು.
ರವಿವಾರ ದಿ. ೨೯ ರಂದು ಜಾತ್ರಾ ಪ್ರಾರಂಭವಾಗಿ ಅಂಬಲಿ ಬಂಡೆಗಳನ್ನು ಸಿದ್ದಪಡಿಸುವುದು ಹಾಗೂ ಕಿಚ್ಚದ ಕಟ್ಟಿಗೆಯನ್ನು ಪೂಜೆ ಮಾಡಿ ತರುವುದು.
ಸೋಮವಾರ ದಿ. ೩೦ ರಂದು ಸಾಯಂಕಾಲ ೬ ಗಂಟೆಗೆ ಶ್ರೀ ಕಲ್ಮೇಶ್ವರ ಗುಡಿ ಸುತ್ತ ಅಂಬಲಿ ಬಂಡಿಗಳು ಪ್ರದಕ್ಷಣೆ ಹಾಕುವುದು. ನಂತರ ಅಂಬಲಿ ಹಾಗೂ ಗುಗ್ಗರಿ ಮಹಾಪ್ರಸಾದ ಜರುಗುವುದು. ರಾತ್ರಿ ಭಜನೆ, ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಮಂಗಳವಾರ ದಿ. ೩೧ ರಂದು ಗ್ರಾಮದ ಭಕ್ತಾಧಿಗಳಿಂದ ಚಕ್ಕಡಿ, ಟ್ರಾಕ್ಟರ, ಟೆಂಪು ಇನ್ನೀತರ ವಾಹನಗಳಿಂದ ಕಿಚ್ಚದ ಕಟ್ಟಿಗೆಯನ್ನು ಕಿಚ್ಚ ತಯಾರಿಸಿ ಸಾಯಂಕಾಲ ೬ ಗಂಟೆಗೆ ಕಿಚ್ಚ ಹಾಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೦.೩೦ಕ್ಕೆ ಸಂಗ್ಯಾ ಬಾಳ್ಯಾ ನಾಟಕ ಇರುವುದು.
ಬುಧವಾರ ದಿ. ೦೧ ರಂದು ಕಲ್ಮೇಶ್ವರ ದೇವಸ್ಥಾನದಲ್ಲಿ ಕಾಯಿ ಒಡೆಯುವುದು ನಂತರ ಭಕ್ತಾಧಿಗಳಿಂದ ತೋಕಾನುತುಕ ಟೆಂಗಿನ ಕಾಯಿಗಳನ್ನು ನೀಡಿ ತಮ್ಮ ಹರಕೆಗಳನ್ನು ತಿರಿಸಿಕೊಳ್ಳುತ್ತಾರೆ. ಗುರುವಾರ ದಿ. ೦೨ ರಂದು ಪಾಲಕಿ ಸೇವೆಯೊಂದಿಗೆ ಜಾತ್ರ್ರೆಯು ಸಂಪನ್ನವಾಗುವುದು ಎಂದು ಗ್ರಾಮದ ಪಂಚಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ:೭೪೦೬೮೨೧೩೦೯

WhatsApp Group Join Now
Telegram Group Join Now
Share This Article