ಬಳ್ಳಾರಿ ಜುಲೈ 28– ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಆಧ್ಯಕ್ಷರಾದ ಶ್ರೀ ಲಿಂಗರಾಜಪ್ಪ ಅವರ ನೇತೃತ್ವದಲ್ಲಿ ಬಳ್ಳಾರಿಯ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಬಳ್ಳಾರಿ ಜಿಲ್ಲಾ ಘಟಕಕ್ಕೆ ಕಲ್ಲೂರು ವೆಂಕಟೇಶಲು ಶೆಟ್ಟಿ ಅವರನ್ನ ನೂತನ ಅಧ್ಯಕ್ಷ್ಯರಾಗಿ ಆಯ್ಕೆ ಮಾಡಲಾಗಿದೆ.
ಈ ನೇಮಕಾತಿಯನ್ನು 27 ಜುಲೈ 2025 ರಂದು ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿಗಳ ಅನುಮೋದನೆಯೊಂದಿಗೆ ಘೋಷಿಸಲಾಗಿದೆ. ನೂತನ ಜಿಲ್ಲಾಧ್ಯಕ್ಷರ ನೇಮಕಾತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಸಂಘಟನೆಯ ಕ್ರಿಯಾಶೀಲತೆ ಮತ್ತಷ್ಟು ಬಲಪಡುವ ನಿರೀಕ್ಷೆ ಇದೆ ಎಂದು ಅವರು ತಿಳಿದಿದರು.
ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಹಿರೇಮಠ್, ಸಹ ಕಾರ್ಯದರ್ಶಿ ವಿನಾಯಕ್ ತಲಗೇರಿ, ಕಾರ್ಯದರ್ಶಿ ಅಶೋಕ್ ಜೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.