ಮೂಡಲಗಿ : ಇತ್ತೀಚಿಗೆ ತಾಲೂಕಿನ ನಾಗನೂರಿನ ಅಥರ್ವ ಕಾಲೇಜನಲ್ಲಿ ಜರುಗಿದ, 2024-25 ನೇ ಸಾಲಿನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮೂಡಲಗಿ ತಾಲೂಕಾ ಪದವಿ ಪೂರ್ವ ಮಹಾ ವಿದ್ಯಾಲಯ ಕ್ರೀಡಾಕೂಟದಲ್ಲಿ, ಕಲ್ಲೋಳಿಯ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಅನೇಕ ಕ್ರೀಡೆಗಲ್ಲಿ ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಪ್ರಶಂಶೆಗೆ ಪಾತ್ರವಾಗಿದೆ.
3000 ಮೀಟರ ಓಟದಲ್ಲಿ ಮಲ್ಲಿಕಾರ್ಜುನ ಚಳ್ಳರ ಪ್ರಥಮ, 500ಮೀ ಓಟದಲ್ಲಿ ಸಿದ್ದಪ್ಪ ಬೆಳಗಲಿ ಪ್ರಥಮ, 200ಮೀ ಓಟದಲ್ಲಿ ಗೋಪಾಲ್ ಕುರುಬನ್ನವರ ಪ್ರಥಮ, ಗುಡ್ಡಗಾಡು ಓಟದಲ್ಲಿ ಮಲ್ಲಿಕಾರ್ಜುನ ಚಳ್ಳರ ಪ್ರಥಮ, ಸಿದ್ದಪ್ಪ ಬೆಳಗಲಿ ದ್ವಿತೀಯ ಸ್ಥಾನ ಹಾಗೂ ಗುಂಪು ಕ್ರೀಡೆಯಾದ ಖೋ ಖೋ ಪಂದ್ಯಾವಳಿಯಲ್ಲಿ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ, ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಬೆಳಕೂಡ, ಅಧ್ಯಕ್ಷರಾದ ರಮೇಶ್ ಬೆಳಕೂಡ, ನಿರ್ದೇಶಕರಾದ ಡಾ.ಭೋಜರಾಜ್ ಬೆಳಕೂಡ, ಆಡಳಿತಾಧಿಕಾರಿ ಪಿ.ಆರ್.ಗರಗಟ್ಟಿ, ಪ್ರಾಚಾರ್ಯರಾದ ಎಸ್.ಬಿ.ಮನ್ನಿಕೇರಿ, ದೈಹಿಕ ಶಿಕ್ಷಕರಾದ ಯು.ಆರ್.ಗುಡನ್ನವರ್, ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.