ಬಳ್ಳಾರಿ,01..ಆಂಧ್ರಪ್ರದೇಶದ ಆದೋನಿ ಹಾಗೂ ಆದೋನಿ ಮೂಲಕ ಕಾರ್ಯಾಚರಣೆಯಾಗುವ ಕರಾರಸಾ ನಿಗಮದ ಸಾರಿಗೆಗಳ ಕಾರ್ಯಾಚರಣೆಯನ್ನು ಆ.31 ರಿಂದ ಆದೋನಿ ಎ.ಪಿ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಕಕರಸಾ ನಿಗಮ, ಕರಾರಸಾ ನಿಗಮ ಮತ್ತು ವಾಕರಸಾ ಸಂಸ್ಥೆಯಿAದ ಕಾರ್ಯಾಚರಣೆಯಾಗುವ ಮಂತ್ರಾಲಯ, ರಾಯಚೂರು, ಎಮ್ಮಿಗನೂರು, ಶ್ರೀಶೈಲಂ ವಯಾ ಆದೋನಿ ಹಾಗೂ ಆದೋನಿ ಸಾರಿಗೆಗಳ ಕಾರ್ಯಾಚರಣೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಆದೋನಿ ಪಟ್ಟಣದ ಎ.ಪಿ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ವಿಸ್ತರಣೆ ಮಾಡಲಾಗಿದೆ.
ಹಾಗೆಯೇ ಆದೋನಿ ಪಟ್ಟಣದಲ್ಲಿ ಪ್ರಯಾಣಿಕರು ಇಳಿಯಲು, ಹತ್ತಲು ಪ್ರಸ್ತುತ ನೀಡುತ್ತಿರುವ ನಿಲುಗಡೆಗಳೊಂದಿಗೆ ಹೆಚ್ಚುವರಿಯಾಗಿ ಆದೋನಿ ಪಟ್ಟಣದ ನಿರ್ಮಲ್ ಟಾಕೀಸ್ ಹತ್ತಿರ, ಸರ್ಕಾರಿ ಜನರಲ್ ಆಸ್ಪತ್ರೆ ಹತ್ತಿರ ಹತ್ತಲು, ಇಳಿಯಲು ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆಗಳನ್ನು ಕಲ್ಪಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೇವೆಯನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಕರಸಾ ನಿಗಮ ಬಳ್ಳಾರಿ ವಿಭಾಗ: ಕಾರ್ಯಾಚರಣೆ ವಿಸ್ತರಣೆ
