ಕಾಗವಾಡ: ರಾಚವಿ ವಿದ್ಯಾ ವಿಷಯಕ ಪರಿಷತ್ತಿಗೆ ಆಯ್ಕೆ: ಕು. ಶುಭಂ ಬೋರಗಾಂವೆ

Pratibha Boi
ಕಾಗವಾಡ: ರಾಚವಿ ವಿದ್ಯಾ ವಿಷಯಕ ಪರಿಷತ್ತಿಗೆ ಆಯ್ಕೆ: ಕು. ಶುಭಂ ಬೋರಗಾಂವೆ
WhatsApp Group Join Now
Telegram Group Join Now

ಕಾಗವಾಡ ಪಟ್ಟಣದ ಎಸ್.ಎಂ.ಎ.ಟಿ.ನ ಶಿವಾನಂದ ಮಹಾವಿದ್ಯಾಲಯದ, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸ್ವಯಂ ಸೇವಕನಾದ ಕು. ಶುಭಂ ಬೋರಗಾಂವೆ ಇವರನ್ನು ೨೨-೦೮-೨೦೨೫ರಿಂದ ೨೧-೦೮-೨೦೨೭ರ ಎರಡು ವರ್ಷದ ಅವಧಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ವಿದ್ಯಾವಿಷಯಕ ಪರಿಷತ್ತಿನ ಸಭೆಗೆ ಎನ್‌ಎಸ್‌ಎಸ್ ವಿಭಾಗದಿಂದ ನೂತನ ಸದಸ್ಯರನ್ನಾಗಿ ಮಾನ್ಯ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಹಾಗೂ ಕುಲಸಚಿವರಾದ ಸಂತೋಷ ಕಾಮಗೌಡ ಅವರು ನಾಮ ನಿರ್ದೇಶನ ಮಾಡಿ ಅನುಮೂದಿಸಿದ್ದಾರೆ.
ಕು. ಶುಭಂ ಬೋರಗಾಂವೆ ಅವರನ್ನು ಎಸ್.ಎಂ.ಎ.ಟಿ’ನ ಶಿವಾನಂದ ಮಹಾವಿದ್ಯಾಲಯ, ಕಾಗವಾಡದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ. ಬಿ.ಎ. ಪಾಟೀಲ, ಆಡಳಿತಾಧಿಕಾರಿಗಳಾದ ಮೇಜರ್ ವ್ಹಿ.ಎಸ್. ತುಗಶೆಟ್ಟಿಯವರು, ಪ್ರಾಚಾರ್ಯರಾದ ಡಾ. ಎಸ್.ಪಿ. ತಳವಾರ, ಎನ್.ಎಸ್.ಎಸ್. ಘಟಕಗಳು ಹಾಗೂ ಸಂಸ್ಥೆಯ ಸಮಸ್ತ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.

WhatsApp Group Join Now
Telegram Group Join Now
Share This Article