ಕಾಗವಾಡ: ಪಟ್ಟಣದ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿ ಟನ ಕಬ್ಬಿಗೆ 3500 ರೂಪಾಯಿ ದರ ನೀಡುವಂತೆ ಆಗ್ರಹಿಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತ ಬಂದ್ ಮಾಡಿ ಬೆಳಗಾವಿ-ಮಿರಜ ರಸ್ತೆ ತಡೆದು ಸರ್ಕಾರ ಹಾಗೂ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಕಾಗವಾಡ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ರೈತ ಸಂಘ,ಸ್ವಾಭಿಮಾನಿ ರೈತ ಸಂಘ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಕರವೇ,ಜಯ ಕರ್ನಾಟಕ ಸಂಘ ಸದಸ್ಯರು ಭಾಗವಹಿಸಿದರು ಇದರ ಜೊತೆಗೆ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ನ್ಯಾಯವಾದಿಗಳ ಬೆಂಬಲ ಸೂಚಿಸಿದರು, ಇದರ ಜೊತೆಗೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಬೆಂಬಲ ನೀಡಿರುದರಿಂದ ರೈತರ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು ರಸ್ತೆಯಲ್ಲಿಯೇ ಅಡುಗೆ ತಯ್ಯಾರಿಸಿ ಊಟ ಮಾಡಿದರು. ತಾಲ್ಲೂಕಿನ ಶೇಡಬಾಳ,ಹಾಗೂ ಶಿರಗುಪ್ಪಿ ಗ್ರಾಮದಲ್ಲಿ ಸಹಸ ರೈತರು ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಒಟ್ಟಿನಲ್ಲಿ ಮಹಾರಾಷ್ಟ್ರ ಗಡಿ ಹೊಂದಿ ಕೊಂಡಿರುವ ಕಾಗವಾಡ ತಾಲ್ಲೂಕು ಕಬ್ಬು ಬೆಳೆಗಾರರ ಹೋರಾಟಕ್ಕೆ ತಾಲ್ಲೂಕಿನ ಬಸ್ ಸಂಚಾರ ಸಂಪೂರ್ಣ ಬಂದ ಆಗಿತ್ತು.


