ಗೋಶಾಲೆಗಳಿಗೆ ಪೂರ್ಣ ಅನುದಾನ ಬಿಡುಗಡೆಗೆ ಕಾಡಸಿದ್ಧೇಶ್ವರ ಶ್ರೀಗಳ ಪ್ರತಿಭಟನೆ

Ravi Talawar
ಗೋಶಾಲೆಗಳಿಗೆ ಪೂರ್ಣ ಅನುದಾನ ಬಿಡುಗಡೆಗೆ ಕಾಡಸಿದ್ಧೇಶ್ವರ ಶ್ರೀಗಳ ಪ್ರತಿಭಟನೆ
WhatsApp Group Join Now
Telegram Group Join Now

ಬೆಳಗಾವಿ,ಏ.೦೨: ರಾಜ್ಯದ ಗೋ ಶಾಲೆಗಳಿಗೆ ಅಗತ್ಯ ಅನುದಾನ ನೀಡಿ, ಈಗಾಗಲೇ ಕಡಿತಗೊಳಿಸಿರು ಅನುದಾನ ಪೂರ್ಣವಾಗಿ ನೀಡಿ ಎಂದು ತಾಲೂಕಿನ ಶಿವಾಪೂರ ಮುಪ್ಪಿನ ಕಾಡಸಿದ್ಧೇಶ್ವರ ಸ್ವಾಮೀಜಿ ಹಾಗೂ ರಾಜ್ಯ ರೈತ ಸಂಘದ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.

ನಗರದ ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸ್ವಾಮೀಜಿಗಳು ಹಾಗೂ ರೈತರು ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮನವಿ ನೀಡಿದರು. ಇದೇ ವೇಳೆಯಲ್ಲಿ ರೈತರನ್ನು ಜಿಲ್ಲಾಧಿಕಾರಿ ಆವರಣದಲ್ಲಿ ಬಿಡದಂತೆ ಪೊಲೀಸರು ತಡೆದರು. ಹೀಗಾಗಿ ಕುಪಿತಗೊಂಡ ರೈತರು ಪೊಲೀಸ್ ಬ್ಯಾರಿಕೇಡ್‌ಗಳನ್ನು ತಳ್ಳಿ ಕಚೇರಿ ಆವರಣಕ್ಕೆ ನುಗ್ಗಿದರು.

ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಗೋ ಶಾಲೆಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದೇವೆ ಆದರೂ ಸರ್ಕಾರ ಈವರೆಗೆ ಸಚಿವರು ಸೂಕ್ತ ನಿರ್ಧಾರ ತಿಳಿಸಿಲ್ಲ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಶೀಘ್ರವೇ ರೈತರು ಹಾಗೂ ಗೋಶಾಲೆಗಳ ಅನುದಾನ ಸಂಬಂಧ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಪರಿಹಾರ ಒದಗಿಸಿಕೊಡಬೇಕು ಎಂದು ಶ್ರೀಗಳು ಸರ್ಕಾರವನ್ನು ಒತ್ತಾಯ ಮಾಡಿದರು. ಈ ವೇಳೆಯಲ್ಲಿ ರೈತರು, ಮಠದ ಭಕ್ತರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article