ಹಸಿರು ಕ್ರಾಂತಿ ವರದಿ ಜಮಖಂಡಿ: ತಾಲೂಕಿನ ಕಡಪಟ್ಟಿ-ಹಂಚಿನಾಳ ಗ್ರಾಮದ ಕಡಪಟ್ಟಿಯ ಜೋಡು ಬಸವಣ್ಣನ ದೇವಸ್ಥಾನಗಳಿಗೆ ಸೋಮವಾರ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ದರ್ಶನ ಪಡೆದರು.
ದೊಡ್ಡ ಬಸವಣ್ಣನ ದೇವಸ್ಥಾನ ಟ್ರಸ್ಟ ಕಮೀಟಿ ಅಧ್ಯಕ್ಷ ಮಹಾದೇವ ಇಟ್ಟಿ ಸಹಿತ ಇತರರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅರ್ಧಕ್ಕೆ ಸ್ಥಗಿತಗೊಂಡಿರುವ ಸಮುದಾಯ ಭವನ ನಿರ್ಮಾಣಕ್ಕೆ ೧.೫ ಕೋಟಿ ಅನುದಾನ ಸರಕಾರದಿಂದ ನೀಡುವಂತೆ ಮನವಿ ಸಲ್ಲಿಸಿದರು.
ನಂತರ ಪವಾಡ ಬಸವಣ್ಣನ ದೇವಸ್ಥಾನ ತೆರಳಿದ ಬಸವಣ್ಣನ ದರ್ಶನ ಪಡೆದು ಪವಾಡ ಬಸವಣ್ಣ ಸುಧಾರಣಾ ಸಮಿತಿ ವತಿಯಿಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಗುರುಪಾದ ಇಟ್ಟಿ, ಮಹಾದೇವ ಇಟ್ಟಿ, ಎಸ್.ಎಸ್. ಕಾಡದೇವರ, ಪಿಡಿಓ ಸುರೇಶ ಕಡಪಟ್ಟಿ, ಸಚೀನ ಪೂಜಾರಿ ಸಹಿತ ಹಲವರು ಇದ್ದರು.