ನರೇಗಾ ಕೆಲಸದ ನಂತರ ಕಾರ್ಮಿಕರಿಗೆ ಕಬಡ್ಡಿ, ಖೋಖೋ ಆಟ!

Ravi Talawar
ನರೇಗಾ ಕೆಲಸದ ನಂತರ ಕಾರ್ಮಿಕರಿಗೆ ಕಬಡ್ಡಿ, ಖೋಖೋ ಆಟ!
WhatsApp Group Join Now
Telegram Group Join Now

ಗದಗ23: ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯತಿ ವಿಭಿನ್ನ ಮತ್ತು ವಿಶಿಷ್ಟ ನಡೆ ಅನುಸರಿಸಿ ನರೇಗಾ ಯೋಜನೆಗೆ ಸಾಂಸ್ಕೃತಿಕ, ಜನಪದ ಮೆರುಗು ನೀಡುತ್ತಿದೆ.

ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಲು ಮುಂಡರಗಿ ತಾಲೂಕು ಪಂಚಾಯತಿ ಮುಂದಾಗಿದೆ.

ಜತೆಗೆ ಕೃಷಿ ಕಾರ್ಮಿಕರನ್ನು ಸೆಳೆಯಲು ಕೆಲಸ ಮುಗಿಸಿದ ನಂತರ ದೇಸಿ ಆಟಗಳನ್ನು ಆಡಿಸಲಾಗುತ್ತಿದೆ. ಮಹಿಳಾ ಕಾರ್ಮಿಕರಿಂದ ಸೋಬಾನ ಪದ (ಜನಪದ ಹಾಡು) ಹಾಡಿಸಿ ಮನರಂಜನೆಯನ್ನೂ ನೀಡಲಾಗುತ್ತಿದೆ.

ಜೊತೆಗೆ ಕಬ್ಬಡ್ಡಿ, ಖೋ ಖೋ ಎಂಬ ಎಲೆ ಮರೆ ಕಾಯಿಯಂತಹ ಕ್ರೀಡೆಗಳಿಗೆ ನರೇಗಾ ಕಾಮಗಾರಿ ಮೂಲಕ ಜನಪ್ರಿಯ ಮಾಡಲು ಸಜ್ಜಾಗಿದೆ. ಅದರಲ್ಲೂ ದೇಸಿ ಕ್ರೀಡೆಗಳನ್ನು ಆಯ್ದುಕೊಂಡು ಕೂಲಿಕಾರ ಮಹಿಳೆಯರನ್ನು ಇಲ್ಲಿ ಸಕ್ರಿಯ ಮಾಡಿರುವುದು ತುಂಬ ವಿಶೇಷ.

ದುಡಿಯುವ ಕೂಲಿಕಾರರಿಗೆ ಮನರಂಜನೆಯು ಮುಖ್ಯ. ಮಳೆಗಾಲ ಮರೀಚಿಕೆಯಾದ ಈ ದಿನಗಳ ನಡುವೆ ನರೇಗಾ ಯೋಜನೆ ಗ್ರಾಮೀಣ ಜನರಿಗೆ ದಾರಿದೀಪ. ಇದನ್ನು ಮನಗಂಡ ಮುಂಡರಗಿ ತಾಲೂಕು ಪಂಚಾಯತಿ ಸುಸ್ಥಿರ ನರೇಗಾ ಅಂಕಿ ಸಂಖ್ಯೆ ಅಭಿವೃದ್ಧಿಯತ್ತ ಸಾಂಸ್ಕೃತಿಕ, ಜನಪದ ಚಟುವಟಿಕೆಗಳ ಮೂಲಕ ಗಮನಹರಿಸಿ ಜನರಿಗೆ ಮಾಹಿತಿ ತಲುಪಿಸುತ್ತಿರುವುದು ಮಾದರಿ ಸಂಗತಿ.

ಪುರುಷರಿಗಿಂತ ಗ್ರಾಮೀಣ ಪ್ರದೇಶದ ಮಹಿಳೆಯರೇ ಈ ಆಟದಲ್ಲಿ ಹೆಚ್ಚು ತೊಡಗಿರುವುದು ಗಮನಿಸತಕ್ಕ ಅಂಶ. ಹಾಗಾಗಿ ಮುಂಡರಗಿ ತಾಲೂಕು ಪಂಚಾಯತ ಕಳೆದ ವರ್ಷ ನರೇಗಾ ಕಾಮಗಾರಿಗಳಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣದಲ್ಲಿ ಶೇಕಡಾ 50% ರಷ್ಟು ಯಶಸ್ಸು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು

 

WhatsApp Group Join Now
Telegram Group Join Now
Share This Article