ಕಾಗವಾಡ: ತಾಲೂಕಿನ ಜುಗೂಳ ಗ್ರಾಮದಲ್ಲಿ ಜಲ್‌ಜೀವನ ಮೀಷನ್ ಕಾಮಗಾರಿಯಲ್ಲಿಯ ಮಣ್ಣಿಗೆ ಕಣ್ಣ ಹಾಕಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ಸತ್ಯಕ್ಕೆ ದೂರವಾಗಿದೆಯೆಂದು ಜುಗೂಳ ಗ್ರಾ.ಪಂ. ಅಧ್ಯಕ್ಷ ಕಾಕಾ ಪಾಟೀಲ ಹೇಳಿದರು.
ಅವರು ಸೋಮವಾರ ದಿ. ೨೪ ರಂದು ಜುಗೂಳ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ನಮ್ಮ ಗ್ರಾಮಕ್ಕೆ ಜಲ್‌ಜೀವನ ಮೀಷನ್ ಯೋಜನೆಯ ಅಡಿಯಲ್ಲಿ ಓವ್ಹರ್ ಹೆಡ್ ಟ್ಯಾಂಕ್ ಕಟ್ಟಬೇಕಾಗಿತ್ತು. ಆದರೇ ಅದನ್ನು ನಿರ್ಮಿಸಲು ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಗ್ರಾಮದ ಸಂದೇಶ ಕುಮಟೋಳೆ ಅವರ ಜಮೀನಿನಲ್ಲಿ ಬಾಡಿಗೆ (ಲಿಜ್) ಮೂಲಕ ಪಡೆದು ಟ್ಯಾಂಕ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿ ಕಾಮಗಾರಿಗಾಗಿ ಭೂಮಿ ಅಗಿದ ಮಣ್ಣನ್ನು ಆ ಜಾಗದ ಮಾಲೀಕರಿಗೆ ನೀಡಲಾಗಿದೆ. ಈ ಕುರಿತು ಸ್ಥಳದ ಮಾಲಿಕರೊಂದಿಗೆ ಕರಾರು ಕೂಡಾ ಮಾಡಲಾಗಿದೆ. ಸ್ಥಳವಕಾಶ ಇಲ್ಲದ ಕಾರಣ ಆ ಮಣ್ಣನ್ನು ಸರ್ಕಾರಿ ಶಾಲೆಯ ಸ್ಥಳದಲ್ಲಿ ಸಂಗ್ರಹಿಸಲಾಗಿತ್ತು. ಈಗ ಆ ಮಣ್ಣನು ಅವರಿಗೆ ನೀಡ;ಲಾಗಿದೆ ಎಂದು ತಿಳಿಸಿದರು.
ಆದರೆ ದಿ.೨೩ ರಂದು ರಾಜಕೀಯ ದ್ವೇಶದಿಂದ ಗ್ರಾಮದ ಯುವ ಮುಖಂಡ ಉಮೇಶ ಪಾಟೀಲರ ಹೆಸರನ್ನು ಕೆಡಿಸಲು ಕೆಲ ಮಾಧ್ಯಮಗಳಲ್ಲಿ ಆಧಾರ ರಹಿತ ಸುದ್ದಿಗಳು ಪ್ರಕಟಗೊಂಡಿದ್ದು, ಅದು ಸತ್ಯಕ್ಕೆ ದೂರವಾಗಿದೆ. ಇದರಲ್ಲಿ ಯಾವುದೇ ರೀತಿಯ ಸಂಶಯ ವ್ಯಕ್ತ ಪಡಿಸುವ ಅವಶ್ಯಕತೆ ಇಲ್ಲ. ಈ ಕುರಿತು ನಾವು ಬಹಿರಂಗವಾಗಿ ಚರ್ಚೆಗೆ ಸಿದ್ಧರಿದ್ದೇವೆ ಎಂದರು.
ಇನ್ನೂ ಇದೇ ವೇಳೆ ಮುಖಂಡರಾದ ಉಮೇಶ ಪಾಟೀಲ ಮಾತನಾಡಿ, ನನಗೂ ಮತ್ತು ಆ ಮಣ್ಣಿಗೂ ಯಾವುದೇ ಸಂಬAಧವಿಲ್ಲ. ಕೇವಲ ಆ ಮಣ್ಣು ಎತ್ತಲು ನಮ್ಮ ಜೆಸಿಬಿ ಬಳಿಕೆ ಮಾಡಲಾಗಿದೆ ಅಷ್ಟೆ. ಈ ರೀತಿ ನನ್ನ ಹೆಸರನ್ನು ಕೆಡಿಸುತ್ತೀರುವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಗ್ರಾ.ಪಂ.ಗೆ ಸ್ಥಳ ಲೀಜ್ ನೀಡಿರುವ ಸಂದೇಶ ಕುಮಟೋಳೆ ಕೂಡಾ ಮಾತನಾಡಿ, ಸ್ಪಷ್ಟಿಕರಣ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕಾಕಾ ಪಾಟೀಲ, ಸದಸ್ಯರಾದ ರಾಜು ಪಾಟೀಲ, ಉಮೇಶ ಪಾಟೀಲ, ಮುಖಂಡರಾದ ಮಹಾದೇವ ಕಾಂಬಳೆ, ಅವಿನಾಶ ಪಾಟೀಲ, ನೀತಿನ ಪಾಟೀಲ, ಬಾಬಾಸಾಬ ತಾರದಾಳೆ, ಉದಯ ದೇಸಾಯಿ, ಉಪಸ್ಥಿತಿತರಿದರು.