ಮಹಾಲಿಂಗಪುರ 19:- ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಶಿಕ್ಷಣದ ಹಕ್ಕನ್ನು ಬಲಪಡಿಸಿಕೊಳ್ಳಬೇಕು. ಇತ್ತೀಚೆಗೆ ನಡೆಯುತ್ತಿರುವ ಬಾಲ್ಯ ವಿವಾಹದ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳಿಗಾಗಿ ಸರ್ವೋಚ್ಚ ನ್ಯಾಯಾಲಯ ಆಶಾ ಎಂಬ ಯೋಜನೆ ಮಾಡಿ ೧೫೧೦೦ ಸಹಾಯವಾಣಿ ನೀಡಿದೆ. ಶಿಕ್ಷಣದ ಜಾಗೃತಿ ಪಡಿಸುವ ಕಾರ್ಯದಲ್ಲಿ ತೊಡಗಿ ಬಾಲಕಾರ್ಮಿಕರಿದ್ದರೆ ಕೂಡಲೇ ತಿಳಿಸಿ ಜೊತೆಗೆ ಸುತ್ತಮುತ್ತಲು ಅನೈತಿಕ ಚಟುವಟಿಕೆಗಳು ಕಂಡು ಬಂದರೆ ಸಮೀಪದ ಪೊಲೀಸ್ ಠಾಣೆಗೆ ಕರೆಮಾಡಿ ತಿಳಿಸಿ ಎಂದು ಹಿರಿಯ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾನೂನಿನ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಭಾರಿ ಪ್ರಾಚಾರ್ಯ ಎಸ್ ಎಲ್ ಜೋಡಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ ಜಿಡ್ಡಿಮನಿ,ಉಪಾಧ್ಯಕ್ಷ ವಿಜಯ ಸಭಕಾಳೆ,ಸದಸ್ಯರಾದ ಶೇಖರ ಮಗದುಮ,ಮಹಾಂತೇಶ ಪಾತ್ರೋಟ,ರವಿ ಗಿರಿಸಾಗರ ಉಪನ್ಯಾಸಕರಾದ ಸಿದ್ರಾಮ ಸವಸುದ್ದಿ, ರಾಜೇಶ್ವರಿ ತುಕಾನಟ್ಟಿ, ದೀಪಾ ಪಾಟೀಲ, ಶ್ವೇತಾ ಮರನಾಳ,ಪಾರ್ವತಿ ನುಚ್ಚಂಡಿ, ದಾನಮ್ಮ ಹಳ್ಳಿ, ವಿಶಾಲಾಕ್ಷಿ ನಾಯಕ ಸೇರಿದಂತೆ ವಿದ್ಯಾರ್ಥಿಗಳಿದ್ದರು. ಶಿಕ್ಷಕಿ ವಿನುತಾ ಕೊಳಕಿ ನಿರೂಪಿಸಿ,ವಂದಿಸಿದರು.
ಬಾಲ್ಯ ವಿವಾಹದ ಬಗ್ಗೆ ಎಚ್ಚರವಿರಲಿ : ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ.
