ಬಳ್ಳಾರಿ : ಬಳ್ಳಾರಿ ನಗರದ ಪಶ್ಚಿಮ ವಲಯದ ಪಾರ್ವತಿ ನಗರ ಕ್ಲಸ್ಟರ್ ನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಜೆ ಎಸ್ ಡಬ್ಲ್ಯೂ ರೂಮ್ ಟು ರೀಡ್ ಗ್ರಂಥಾಲಯ ಕಾರ್ಯಕ್ರಮವನ್ನು ಕಳೆದ ವರ್ಷ ಪ್ರಾರಂಭಿಸಿ ಆ ಮೂಲಕ ಒಂದರಿಂದ ಐದನೇಯ ತರಗತಿಯ ಮಕ್ಕಳಲ್ಲಿ ಓದುವ ಹವ್ಯಾಸವನ್ನು ವೃದ್ಧಿಸುವ ಯೋಜನೆಯನ್ನು ರೂಪಿಸಿದ್ದು, ಕಾರ್ಯಕ್ರಮದ ಯೋಜನೆಯಡಿಯಲ್ಲಿ ಇಂದು ಸ.ಮಾ.ಹಿ.ಪ್ರಾ.ಶಾಲೆ, ಪಾರ್ವತಿ ನಗರ ಕ್ಲಸ್ಟರ್ ಹಂತದ ಶಿಕ್ಷಕರ ಮಾಸಿಕ ಸಭೆ ಹಾಗೂ ಪುಸ್ತಕಗಳ ಬ್ಯಾಗ್ ರೋಟೇಶನ್ ಪ್ರಕ್ರಿಯೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ 7 ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಜೆ ಎಸ್ ಡಬ್ಲ್ಯೂ ರೂಮ್ ಟು ರೀಡ್ ನ ತಾಲ್ಲೂಕು ಕಾರ್ಯಕ್ರಮ ಸಂಯೋಜಕಿಯಾದ ಶ್ರೀಮತಿ ಶೃತಿ ಗಡಾದ ರವರು ಭಾಗವಹಿಸಿ ಕಾರ್ಯಕ್ರಮದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ನೀಡಿ ಪುಸ್ತಕಗಳ ರೋಟೇಶನ್ ನೆರವೆರಿಸಿಕೊಟ್ಟರು. ಸ.ಮಾ.ಹಿ.ಪ್ರಾ.ಶಾಲೆ, ಪಾರ್ವತಿ ನಗರ 2nd ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಸಿ ಆರ್ ಪಿ ಶ್ರೀಮತಿ ಶಿವಮ್ಮ.ಡಿ ಮತ್ತು
ಶ್ರೀಮತಿ ಬೋರಮ್ಮ ಕೆಂಭಾವಿ ಶಿಕ್ಷಕರು & ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರು ಮತ್ತು ಪಾರ್ವತಿ ನಗರ ಕ್ಲಸ್ಟರ್ ನ ಎಲ್ಲಾ ರೂಮ್ ಟೂ ರೀಡ್ ನ ಶಿಕ್ಷಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದರು.