ಗ್ರಾಮೀಣ ಯುವ ಕ್ರೀಡೆಗೆ ಜೆಎಸ್ ಡಬ್ಲ್ಯೂ ಪ್ರೋತ್ಸಾಹ

Ravi Talawar
ಗ್ರಾಮೀಣ ಯುವ ಕ್ರೀಡೆಗೆ ಜೆಎಸ್ ಡಬ್ಲ್ಯೂ ಪ್ರೋತ್ಸಾಹ
WhatsApp Group Join Now
Telegram Group Join Now
ಸಂಡೂರು16.: ತಾಲೂಕಿನ  ತೋರಣಗಲ್ಲು  ಹಾಗೂ ತಾರಾನಗರ ಗ್ರಾಮಗಳಲ್ಲಿ  ಗ್ರಾಮದ ಯುವಕರು ಹಾಗೂ ಸೂಪರ್ ಸ್ಟಾರ್ ಪ್ರೀಮಿಯರ್ ಕ್ರಿಕೆಟ್ ಲೀಗ್ ನ್ನು ಜೆಎಸ್ ಡಬ್ಲ್ಯೂ ಫೌಂಡೇಶನ್ ಸಹಯೋಗದಲ್ಲಿ ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು.
ತೋರಣಗಲ್ಲು ಗ್ರಾಮದಲ್ಲಿ ಶ್ರೀ ಶಂಕರಲಿಂಗ ದೇವರ ರಥೋತ್ಸವದ ನಿಮಿತ್ತ ಆಯೋಜಿಸಿದ್ದ ಕ್ರಿಕೆಟ್ ಲೀಗ್ ನಲ್ಲಿ ಒಟ್ಟು 18 ತಂಡಗಳ 270 ಯುವಕರು ಭಾಗವಹಿಸಿದ್ದರು. ಆದಿತ್ಯ ಸ್ಟ್ರೈಕರ್‌ ತಂಡ ಮೊದಲ ಸ್ಥಾನ, ದ್ವಿತೀಯ ಬಹುಮಾನ ತೋರಣಗಲ್ಲು ಹಂಟರ್ಸ್ ಪಡೆದರು. ತೋರಣಗಲ್ಲು ಪಟ್ಟಣದ ಮುಖಂಡರಾದ ಕೆ.ಎಸ್. ಎಲ್ ಸ್ವಾಮಿ, ಗಾಳಿ ಎಕಂಬಾರಪ್ಪ, ನೂರ್ ಅಹಮೆದ್, ರವಿ ಎಂ, ಗ್ರಾಮ ಪಂಚಾಯತಿ ಅಧ್ಯಕ್ಷ ವೀರೇಶಪ್ಪ ಸೇರಿದಂತೆ ಗ್ರಾ.ಪಂ. ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.
ತಾರಾನಗರ ಗ್ರಾಮದಲ್ಲಿ ಒಟ್ಟು 8  ತಂಡಗಳ 120  ಯುವಕರು ಭಾಗವಹಿಸಿದ್ದು, ಮೊದಲ ಬಹುಮಾನವನ್ನು ಮಾಸ್ಟರ್ ಆಫ್ ಮಹಾನಾಯಕ ಮತ್ತು ದ್ವಿತೀಯ ಬಹುಮಾನವನ್ನು ಹರ್ಷ ಕ್ರಿಕೆಟ್ ಆರ್ಮಿ ಅವರು ಪಡೆದರು. ಈ ಸಂದರ್ಭದಲ್ಲಿ ಮುಖಂಡರಾದ ಜಿ.ಟಿ. ಪಂಪಾಪತಿ, ತಾರಾನಗರ ಪಂಚಾಯತಿ ಅಧ್ಯಕ್ಷೆ ಗೀತಾ ಮತ್ತು ಮೇಟಿ ಭುವನೇಶ್ ಸೇರಿದಂತೆ ಗ್ರಾ.ಪಂ.ಸದಸ್ಯರು, ಪ್ರಮುಖರು ಭಾಗವಹಿಸಿದ್ದರು
ಜೆಎಸ್ ಡಬ್ಲ್ಯೂ ಫೌಂಡೇಶನ್ ಕ್ರೀಡಾ ವಿಭಾಗದ ಸಂಯೋಜಕ ಮಹಮ್ಮೆದ್ ರಫೀಕ್ ಅವರು, ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರ ಮೂಲಕ ಕ್ರಿಕೆಟ್ ಟ್ರೋಫಿ, ಮೇಡಲ್ಸ್, ಕಪ್ಸ್ ಮತ್ತು ಸಮವಸ್ತ್ರಗಳನ್ನು ಒದಗಿಸುವದರ ಮೂಲಕ ಗ್ರಾಮೀಣ ಯುವಕರನ್ನು ಕ್ರೀಡೆಯತ್ತ ಪ್ರೋತ್ಸಾಹಿಸಿದರು.
WhatsApp Group Join Now
Telegram Group Join Now
Share This Article