ಆಗಸ್ಟ್ 3 ರಂದು ಜೆ.ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್; 4ಸಾವಿರಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಭಾಗಿ

Ravi Talawar
ಆಗಸ್ಟ್ 3 ರಂದು ಜೆ.ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್; 4ಸಾವಿರಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಭಾಗಿ
WhatsApp Group Join Now
Telegram Group Join Now
ಬಳ್ಳಾರಿ:  ನಗರದಲ್ಲಿ 2025 ಆಗಸ್ಟ್ 3 ರಂದು 4 ನೇ ವರ್ಷದ ಜೆ .ಎಸ್.ಡ್ಲ್ಯೂ ಸ್ಟೀಲ್ ಸಿಟಿ ರನ್  3, 5 ಹಾಗೂ 10 ಕಿಲೋ ಮೀಟರ್ ಮ್ಯಾರಥಾನ್ ನಡೆಯುತ್ತದೆ ಎಂದು ಬಿ.ಸಿ.ಆರ್.ಎಫ್ ತಂಡವರು ತಿಳಿಸಿದರು.
 ನಗರದ ಬಾಲಾ ಹೋಟಲ್ ನಲ್ಲಿ  ಮೊದಲನೇ ಪೂರ್ವ ಸಿದ್ಧತೆ ವಿವಿಧ ತಂಡಗಳೊಂದಿಗೆ ಸ್ವಯಂಸೇವಕ ಚರ್ಚೆ ನಡೆಯಿತು. ದೇಶದಲ್ಲಿನ 14 ರಾಜ್ಯಗಳಿಂದ ಓಟಕ್ಕಾಗಿ ಬಳ್ಳಾರಿಗೆ ಆಗಮಿಸುತ್ತಾರೆ. 4 ಸಾವಿರಕ್ಕಿಂಥ ಹೆಚ್ಚಿನ ಸ್ಪರ್ಧಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಓಟಗಾರರು ಈ ಸ್ಪರ್ಧಿಯಲ್ಲಿ ಭಾಗವಹಿಸುತ್ತಾರೆ.
ಬಳ್ಳಾರಿ ನಗರದ ಬಿಸಿಆರ್ ಎಫ್ ಹಾಗೂ ಕಾಲೇಜಿನ ಸ್ವಯಂಸೇವಕರು ಉತ್ತಮವಾಗಿ ಶಿಸ್ತು ಮತ್ತು ಸಮಯಪಾಲನೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕೆಂದರು. ಸ್ವಯಂ ಸೇವಕರಾದ  ವೈದ್ಯಕೀಯ, ವೇದಿಕೆ, ರಸ್ತೆ ಮಾರ್ಗ, ಪ್ರವೇಶ, ಪ್ರಶಸ್ತಿ ಮತ್ತು ಮೆಡಲ್, ಆಹಾರ, ಮೈದಾನ ತಂಡಗಳು ಹಾಜರಿದ್ದರು.
ರಾಜ್ಯದ ವಿವಿಧ ಜಿಲ್ಲೆಯ ಕ್ರೀಡಾ ಪುಟಗಳು ಆಗಮಿಸುತ್ತಾರೆ ಬೆಂಗಳೂರು ಮೈಸೂರು, ಮಂಗಳೂರು, ಬೆಂಗಳೂರು, ಚಿತ್ರದುರ್ಗ, ಬಳ್ಳಾರಿ ಕೊಪ್ಪಳ ರಾಯಚೂರು, ಬೀದರ, ಬೆಳಗಾವಿ, ಹಾಸನ, ಉಜಿರ, ಉತ್ತರ ಕನ್ನಡ ಇನ್ನಿತರರು ಜಿಲ್ಲೆಗಳಿಂದ ಭಾಗವಹಿಸುತ್ತಾರೆ ಎಂದರು.
ಈ ಸಮಯದ ಬಿಸಿಆರ್ ಎಫ್ ತಂಡದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ತಂಡದ ಸದಸ್ಯರು ಮತ್ತು ಕಾಲೇಜಿನ ಸ್ವಯಂ ಸೇವಕರು ಭಾಗವಹಿಸಿದ್ದರು
WhatsApp Group Join Now
Telegram Group Join Now
Share This Article