ಬೈಲಹೊಂಗಲ. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪುಣ್ಯತಿಥಿಯು ಶುಕ್ರವಾರ 06-12-2024 ರಂದು ನೆರವೇರುವ ಪ್ರಯುಕ್ತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರ ) ಅಂಬೇಡ್ಕರ್ ಧ್ವನಿ ಬೆಂಗಳೂರು ಸಂಘಟನೆ ಮೂಲಕ ಸತತವಾಗಿ 10 ವರ್ಷದ ಮುಂಬೈ ನಗರದ ದಾದರ ನ ಡಾ. ಬಿ ಆರ್ ಅಂಬೇಡ್ಕರ ಅವರ ಸಮಾಧಿ ಸ್ಥಳ ಗೋಪುರಕ್ಕೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಕೆ. ರಾಯಪ್ಪಗೋಳ ಅವರ ನೇತೃತ್ವದಲ್ಲಿ ತಾಲೂಕಿನ ನೇಸರಗಿ ಗ್ರಾಮದಿಂದ ಪ್ರಯಾಣ ಬೆಳೆಸಲಾಯಿತು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ರಾಜ್ಯಾಧ್ಯಕ್ಷರಾದ ಸುರೇಶ ರಾಯಪ್ಪಗೋಳ ಮಾತನಾಡಿ ನಾಳೆಯ ದಿನ ಬಹಳ ಪವಿತ್ರವಾದ ದಿನವಾಗಿದ್ದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪುಣ್ಯ ಭೂಮಿ ಮುಂಬೈನ ದಾದರ ಪಟ್ಟಣದ ಗೋಪುರಕ್ಕೆ ಕಳೆದ 9 ವರ್ಷಗಳಿಂದ ನಮ್ಮ ಸಂಘಟನೆ ವತಿಯಿಂದ ಯಾತ್ರೆ ಮಾಡಿ 10 ನೇ ವರ್ಷಕ್ಕೆ ಈಗ ಪ್ರಯಾಣ ಬೆಳೆಸುತ್ತಿರುವದು ಹೆಮ್ಮೆಯ ಅನಿಸುತ್ತಿದ್ದು, ನಾಳೆ ಲಕ್ಷಾಂತರ ಜನ ಡಾ. ಅಂಬೇಡ್ಕರ್ ಸಮಾಧಿಗೆ ಬೇಟಿ ನೀಡಿ ನಮನ ಸಲ್ಲಿಸುತ್ತಾರೆ ಎಂದರು.
ಈ ಯಾತ್ರೆಯಲ್ಲಿ ಶ್ರೀಮತಿ ರೇಣುಕಾ ಸುರೇಶ. ರಾಯಪ್ಪಗೋಳ,ದ್ಯಾನೇಶ್ವರ ರಾಯಪ್ಪಗೋಳ, ಸುರೇಶ ದೇಮಾಪುರ, ಶ್ರೀಮತಿ ಭಾರತಿ ರಾಯಪ್ಪಗೋಳ, ಸೋಮಪ್ಪ ಹರಿಜನ, ವಿನೋದ ಮಾದಿಗರ, ಕೃಷ್ಣ ರಾಯಪ್ಪಗೋಳ, ಪ್ರವೀಣ ಯಲ್ಲಪ್ಪಣ್ಣವರ, ಸಚಿನ ಕಾಂಬಳೆ, ಪ್ರಕಾಶ ಕಾಂಬಳೆ ಸೇರಿದಂತೆ ಅನೇಕರು ಪ್ರಯಾಣ ಬೆಳೆಸಿದರು.