ಬಳ್ಳಾರಿ04.: ಕರ್ನಾಟಕ ಕಾರ್ಯನಿರತ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣಾ ಕಣ ದಿನದಿಂದ ದಿನಕ್ಕೆ ಚುರುಕಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ವಿವಿಧ ಹುದ್ದೆಗಳಿಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತೀವ್ರ ಪ್ರಚಾರ ನಡೆಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುವರ್ಣವಾಹಿನಿ ಸಂಪಾದಕ ವಿ.ರವಿ, ಉಪಾಧ್ಯಕ್ಷ ಸ್ಥಾನಗಳಿಗೆ ಕೆ.ಮಲ್ಲಯ್ಯ, ಮಲ್ಲಿಕಾರ್ಜುನ ಮತ್ತು ರಸೂಲ್, ಖಜಾಂಚಿ ಸ್ಥಾನಕ್ಕೆ ಪಂಪನಗೌಡ, ಹಾಗು ೨೦ ಕಾರ್ಯಕಾರಿಣಿ ಸದಸ್ಯರ ಸ್ಥಾನಗಳಿಗೆ ಆಂಧ್ರಜ್ಯೋತಿ ಶ್ರೀನಿವಾಸ್, ಪವರ್ ಟಿವಿ ವಿರೇಶ್, ಪ್ರವೀಣ್ ರಾಜ್ ಸೇರಿದಂತೆ ಹಲವರು ಬಲಿಷ್ಠ ಸ್ಪರ್ಧಿಗಳಾಗಿ ಕಾಣಿಸುತ್ತಿದ್ದಾರೆ.
ಈ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕ್ರಿಯಾಶೀಲತೆ ಪತ್ರಕರ್ತರ ಸಂಘದ ಸದಸ್ಯರು ಬಳ್ಳಾರಿ, ಕಂಪ್ಲಿ, ಕುರುಗೋಡು ಸೇರಿದಂತೆ ಹಲವು ಭಾಗಗಳಲ್ಲಿ ಸಂಘದ ಸದಸ್ಯರ ಮನೆಮನೆಗೆ ಭೇಟಿ ನೀಡಿ ಭರ್ಜರಿ ಪ್ರಚಾರ ನಡೆಸಿದರು.
ಪತ್ರಕರ್ತರ ಏಕತೆ, ಸಂಘದ ಅಭಿವೃದ್ಧಿ ಹಾಗೂ ಪತ್ರಿಕಾ ಕ್ಷೇತ್ರದ ಹಿತಾಸಕ್ತಿಗಾಗಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರು ಮಾತನಾಡಿ, ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ, ಹಿರಿಯ ಪತ್ರಕರ್ತರಿಗೆ ಉಚಿತ ಮಾಶಾಸನ, ಜಿಲ್ಲಾ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಪ್ರತ್ಯೇಕ ಬೇಡ್‌ಗಳ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚೆ ನಡೆಸಿದರು.
ಈ ಪ್ರಚಾರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿ. ರವಿ, ಮಾಜಿ ಅಧ್ಯಕ್ಷ ವಾಲಿಬಾಷ, ಮಾಜಿ ಉಪಾಧ್ಯಕ್ಷ ಕೆ. ಬಜಾರಪ್ಪ, ಕೆ. ಮಲ್ಲಯ್ಯ, ಶ್ರೀನಿವಾಸಲು, ಪಂಪನಗೌಡ, ಸಿದ್ದಿಕ್ ಹಾಗೂ ಅನೇಕ ಪತ್ರಕರ್ತರು ಭಾಗವಹಿಸಿದ್ದರು.


