ಬೆಳಗಾವಿ:ಉದಯಕಾಲ ಪತ್ರಿಕೆ ಬೆಳಗಾವಿ ಆವೃತ್ತಿಯ ಸಹ ಸಂಪಾದಕರು ಹಾಗೂ ಹಿರಿಯ ಪತ್ರಕರ್ತ ರಜನಿಕಾಂತ ಯಾದವಾಡೆ ಅವರು ಮೌಲ್ಯಸಂಪದ ಸಂಸ್ಥೆಯಿಂದ ಪ್ರದಾನ ಮಾಡುವ ರಾಜ್ಯಮಟ್ಟದ ಮೌಲ್ಯ ಪತ್ರಿಕೋಧ್ಯಮ ರತ್ನ ಸಮ್ಮಾನ 2025 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೌಲ್ಯಸಂಪದ ಸಂಸ್ಥೆಯ ಸಂಸ್ಥಾಪಕ ಸೋಮಶೇಖರ ಸೊಗಲದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಏಪ್ರಿಲ್ 20 ರಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.