ಬೈಲಹೊಂಗಲ: ಬೆಳಗಾವಿ ಲೋಕಸಭಾ ಚುಣಾವನೆ ಬಿಜೆಪಿ, ಜೆಡಿಎಸ್ ಮಿತ್ರ ಪಕ್ಷದ ಅಭ್ಯರ್ಥಿ ಜಗದೀಶ ಶೆಟ್ಟರ ಅವರು ಕಾರ್ಯಕರ್ತರ ಸಭೆಯನ್ನು ಏ. 3 ರಂದು ಸಂಜೆ 4 ಘಂಟೆಗೆ ಪಟ್ಟಣದ ಪೃಥ್ವಿ ಗಾರ್ಡನ್ ಮುರಗೋಡ ರಸ್ತೆಯಲ್ಲಿ ಏರ್ಪಡಿಸಲಾಗಿದ್ದು. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕರಾದ
ಜಗದೀಶ್ ಮೆಟಗುಡ್ಡ, ವಿಶ್ವನಾಥ ಪಾಟೀಲ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ ಕರೆ ನೀಡಿದರು.
ಅವರು ಪಟ್ಟಣದ ವಿಜಯ ಸೊಸಿಯಲ್ ಕ್ಲಬ್ದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿ ಆಶ್ವಾಸನೆ ನೀಡಿದ ಪ್ರತಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಜನಮಾನಸವನ್ನು ಗೆದ್ದಿದ್ದಾರೆ. ಪಕ್ಷದ ಅಭ್ಯರ್ಥಿ ಯಾರೇ ಆದರೂ ಗೆಲ್ಲಿಸುವ ಗುರಿ ನಮ್ಮದಾಗಿದೆ. ಈ ಬಾರಿ ಬೈಲಹೊಂಗಲ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲರು ಒಗ್ಗಟ್ಟಾಗಿ ಶ್ರಮಿಸುವದಾಗಿ ಭರವಸೆ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದಾದರೂ ಲೋಕಸಭಾ ಚುಣಾವಣೆಯಲ್ಲಿ ಎರಡು ಪಕ್ಷದ ವರಿಷ್ಠರ ಆದೇಶದನ್ವಯ ನಾವೆಲ್ಲರೂ ಒಂದಾಗಿ ಮತಕ್ಷೇತ್ರದಾದ್ಯಂತ ಸಂಚರಿಸಿ ಮೋದಿ ಅವರ ಜನಪರ ಯೋಜನೆಗಳ ಕುರಿತು ಪ್ರತಿ ಮನೆ-ಮನೆಗೆ ಮುಟ್ಟಿಸಿ ಜನತೆಯ ಮನ ಒಲಿಸಲಾಗುವದು ಎಂದರು.
ಪ್ರಧಾನಿಯು ದೂರದೃಷ್ಟಿಯ ನಾಯಕರಾಗಿದ್ದು ಅವರ ದೇಶ ಪ್ರೇಮವನ್ನು ತಮ್ಮ ರಕ್ತದ ಕಣ ಕಣದಲ್ಲಿ ಕೂಡಿದೆ ಎಂದರಲ್ಲದೇ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಲು ಮತ್ತು ರಾಷ್ಟçದ ಹಿತ ಚಿಂತನೆ ಇಟ್ಟುಕೊಂಡು ನಾವೆಲ್ಲರೂ ಮತದಾನ ಮಾಡಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ನಡೆದ ಎನ್ಡಿಎ ಸಮನ್ವಯ ಸಮೀತಿ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಆಗಮಿಸಿ ಅಭ್ಯರ್ಥಿ ಯಾರೇ ಆದರೂ ಪ್ರಧಾನಿ ನರೇಂದ್ರ ಮೋದಿ ಅವರೇ ಅಭ್ಯರ್ಥಿ ಅಂತಾ ತಿಳಿದು ಮತ ಚಲಾಯಿಸಬೇಕು. ಯಾವದೇ ಬಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಪ್ರತಿಯೊಬ್ಬರು ಒಗ್ಗಟ್ಟಾಗಿ ರಾಷ್ಟçದ ಪ್ರಗತಿಗಾಗಿ ಶ್ರಮಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಏನಾದರೂ ಸಮಸ್ಯೆ ತಲೆದೋರಿದರೆ ಇದನ್ನು ಸರಿಪಡಿಸಲು ಕಮೀಟಿ ರಚಿಸಲಾಗಿದೆ ಎಂದರಲ್ಲದೇ 28 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿದೆ. ಕಾರಣ ಮೇ. 7 ರಂದು ನಡೆಯಲಿರುವ ಲೋಕಸಭಾ ಚುಣಾವನೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗಧೀಶ ಶೆಟ್ಟರ ಪರ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಮೇ. 7 ರಂದು ನಡೆಯಲಿರುವ ಬೆಳಗಾವಿ, ಕೆನರಾ ಲೋಕಸಭಾ ಚುಣಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ನಾವೆಲ್ಲರು ಕಷ್ಟಪಟ್ಟು ಶ್ರಮಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನಪರ ಯೋಜನೆಗಳಾದ ಜನಧನ ಖಾತೆ, ಅರ್ಟಿಕಲ್ 370, ರಾಮ ಮಂದಿರ ನಿರ್ಮಾಣ, ಜಲಜೀವನ ಮಿಶನ್, ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ದೇಶದ 80 ಕೋಟಿ ಜನತೆಗೆ ಉಚಿತ ಅಕ್ಕಿ, ಕೃಷಿ ಸಮ್ಮಾನ್ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಸಭಲಗೊಳಿಸುವ ಜೋತೆಗೆ ವಿಶ್ವದಲ್ಲಿಯೇ ಭಾರತವನ್ನು ಅತ್ಯಂತ ಉನ್ನತ ಸ್ಥಾನಕ್ಕೆ ಒಯ್ದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ ಎಂದರು.
ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ ಶೆಟ್ಟರ, ಕೆನರಾ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತ ಚಲಾಯಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಗುರುಪಾದ ಕಳ್ಳಿ, ಚನ್ನಮ್ಮನ ಕಿತ್ತೂರು ಜೆಡಿಎಸ್ ಮಂಡಲ ಅಧ್ಯಕ್ ಎಂ.ವಾಯ್.ಸೋಮಣ್ಣವರ, ಬಿಜೆಪಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಮಂಡಳ ಉಪಾಧ್ಯಕ್ಷ ಸುಭಾಷ ತುರಮರಿ, ಬಿಜೆಪಿ ಮುಖಂಡ ಶ್ರೀಶೈಲ ಯಡಳ್ಳಿ, ಜೆಡಿಎಸ್ ಮುಖಂಡ ಸುಭಾಷ ಬಾಗೇವಾಡಿ ಮಿತ್ರ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.