ಬಳ್ಳಾರಿ: 30…ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಕ್ರಾಸ್ ಬಳಿ ಅಕ್ರಮವಾಗಿ ಪಡಿತರ ಸಾಗಾಣೆ ಮಾಡುತ್ತಿದ್ದ ವಾಹನ ಪಲ್ಟಿಯಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 50 ಲಕ್ಷ ರೂ ಪರಿಹಾರ ನೀಡಬೇಕೆಂದು ಜೆಡಿಎಸ್ ಒತ್ತಾಯಿಸಿದೆ.
ಈ ಕುರಿತು ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಪಕ್ಷದ ಜಿಲ್ಲಾ ಅಧ್ಯಕ್ಷರು ಮೀನಳ್ಳಿ ತಾಯಣ್ಣ ಪಡಿತರವನ್ನು ಅಕ್ರಮವಾಗಿ ಸಾಗಾಟ ಮಾಡುವಾಗ ಬಾದನಹಟ್ಟಿ ರಂಗಪ್ಪ , ಕಲ್ಲಕಂಬ ಪರಮೇಶ್ ಸಾವನ್ನಪ್ಪಿದ್ದಾರೆ. ಇವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಿರಂತರವಾಗಿ ಪಡಿತರ ಅಕ್ಕಿ ದಂಧೆ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ಕುಂಟು ಮಂಜ ಎಂಬುವವರ ಕೊಲೆಯಾಯ್ತು, ಕೆಲ ದಿನಗಳ ಹಿಂದೆ ಬಳ್ಳಾರಿ ನಗರದ ಶರಬಯ್ಯ ಎಂಬುವವರ ಮೇಲೆ ಕೊಲೆಯತ್ನ ನಡೆದಿತ್ತು.ಕುರುಗೋಡಿನ ಎರ್ರಿಸ್ವಾಮಿ, ಉಮೇಶ್ ಎಂಬುವವರು ಅಕ್ರಮ ಪಡಿತರ ದಂಧೆ ನಡೆಸುವವರು ಇವರ ಮೇಲೆ ಈ ವರೆಗೆ ಪ್ರಕರಣ ದಾಖಲಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪ್ರಭಾವ ಬೀರಿ ಕೇಸನ್ನು ವಿಳಂಬ ಮಾಡಿಸಿದ್ದಾರೆಂದು ಆರೋಪಿಸಿದರು.
ಈ ದಂಧೆ ಮಾಡುವ ಜನರ ಮೇಲೆ ಏಳೆಂಟು ಕೇಸುಗಳಾಗಿವೆ. ಆದರೂ ಅವರನ್ನೇಕೆ ರೌಡಿ ಶೀಟಿಗೆ ಸೇರಿಸಿಲ್ಲ. ಈ ಅಕ್ರಮ ದಂಧೆಗೆ ಆಹಾರ ಇಲಾಖೆಯ ಅಧಿಕಾರಿಗಳು ,ಇಲ್ಲಾ ಪೊಲೀಸರ ಸಹಕಾರವೂ ಇದೆ. ಕುರುಗೋಡಿನಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಸಹಕಾರದಿಂದಲೇ ಅಕ್ರಮ ಪಡಿತರ ಸಾಗಾಟ ನಡೆಯುತ್ತಿದೆ ಅದಕ್ಕಾಗಿ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು ಎಂದರು.
ಪಡಿತರ ಕಾರ್ಡುದಾರರಿಂದ 14 ರೂ ನಂತೆ ಖರೀದಿ ಮಾಡಲಾಗುತ್ತಿದೆ ಅದಕ್ಕಾಗಿ ಸ್ಟೋರ್ ಗಳಿಂದ ಅಕ್ಕಿ ತೆಗೆದುಕೊಂಡು ಮಾರುವವರ ಕಾರ್ಡು ರದ್ದು ಮಾಡಬೇಕು. ಈ ಭಾಗದಲ್ಲಿ ಭತ್ತ ಬೆಳೆಯುವುದರಿಂದ ಪಡಿತರ ಅಕ್ಕಿ ಮಾರಾಟವಾಗುತ್ತಿದೆ. ಅದಕ್ಕಾಗಿ ಅಕ್ಕಿ ಬದಲು, ರಾಗಿ, ಜೋಳ, ಬೇಳೆ, ಅಡುಗೆಎಣ್ಣೆ ಕೊಡಬೇಕು ಎಂದರು.
ಪಡಿತರ ಅಜ್ರಮ ಮಾರಾಟ ವಿಷಯದಲ್ಲಿ ಪಡಿತರ ವಿತರಕರೂ ತಪ್ಪು ಮಾಡಿರುವ ಕಾರಣ ಅಂತಹ 60 ಅಂಗಡಿ ಲೈಸೆನ್ಸ್ ಅಮಾನತು ಆಗಿವೆಂದರು. ಲಕ್ಷ್ಮಿಕಾಂತರೆಡ್ಡಿ ಮಾತನಾಡಿ, ಬೆಂಬಲ ಬೆಲೆಯಲ್ಲಿ ಜೋಳ ಖರೀದಿ ಮಾಡಿ ಕಳೆದ ವರ್ಷ ಆರು ತಿಂಗಳ ನಂತರ ಹಣ ಬಂದಿದೆ. ಈ ವರ್ಷ ಒಬ್ಬ ರೈತನಿಂದ ಕೇವಲ ಹತ್ತು ಕ್ವಿಂಟಲ್ ಖರೀದಿ ಮಾಡಲಿದೆಂದು ಹೇಳುತ್ತಿದ್ದಾರೆ. ಉಳಿದವನ್ನು ಎಲ್ಲಿಮಾರಬೇಕು ಎಂದು ಪ್ರಶ್ನಿಸಿದರು.
ಹದಗೆಟ್ಟಿದೆ:
ಜಿಲ್ಲೆಯಲ್ಲಿ ಆಡಳಿತ ಸಂಪುಯರ್ಣ ಹದಗೆಟ್ಟಿದೆ. ದಿನದ 24×7 ನಂತೆ ಒಂದೇ ಕ್ಲಬ್ ನಡೆಯುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಏನು ಕೇಳಿದರೂ ಈ ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಾರೆಂದು ತಾಯಣ್ಣ ಆರೋಪಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ರೆಡ್ಡಿ, ವಿಜಯ್ ಕುಮಾರ್ ಮಧುರೆ, ಹೊನ್ನೂರು ಸ್ವಾಮಿ, ರಾಮಾಂಜನೇಯಲು, ಜಾವೀದ್, ಹೊನ್ನೂರು ವಲಿ, ನಾಗರಾಜ್, ಚಾಗ್ನೂರು ನಾಗರಾಜ್, ಜಮೀಲಾ, ಶಬಾನಾ, ಮತ್ತು ಇತರ ಪದಾಧಿಕಾರಿಗಳು ಸೇರಿದ್ದರು.