ಕಾರ್ಮಿಕ ವಿರೋಧಿ ಲೇಬರ್ ಕೋಡ್ ಮತ್ತು ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಯನ್ನು ವಿರೋಧಿಸಿ : ಜೆ.ಸಿ.ಟಿ.ಯು ಸಾರ್ವತ್ರಿಕ  ಮುಷ್ಕರ

Ravi Talawar
ಕಾರ್ಮಿಕ ವಿರೋಧಿ ಲೇಬರ್ ಕೋಡ್ ಮತ್ತು ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಯನ್ನು ವಿರೋಧಿಸಿ : ಜೆ.ಸಿ.ಟಿ.ಯು ಸಾರ್ವತ್ರಿಕ  ಮುಷ್ಕರ
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 09 : ದೇಶದಲ್ಲಿ ಕೈಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಏಕ ಸೌಮ್ಯ ನಡೆಯುತ್ತಿದೆ ಇವರ ಅಣತಿಯಂತೆ ಕೇಂದ್ರ ಸರ್ಕಾರವು ದುಡಿಯುವ ಜನರ ಜೀವನದ ಮೇಲೆ ನಿರಂತರವಾಗಿ ಪ್ಯಾಸಿಸ್ಟ್ ದಾಳಿಯನ್ನು ನಡೆಸುತ್ತಿದೆ ಮತ್ತು ಕಾರ್ಮಿಕರ ಮೇಲೆ ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಾ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ  ಇದನ್ನು ವಿರೋಧಿಸಿ ಇಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಸಾರ್ವತ್ರಿಕ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದು ಕಾರ್ಮಿಕ ಮುಖಂಡರು ಸಿಪಿಐ ನ ಸತ್ಯ ಬಾಬು ತಿಳಿಸಿದರು.
 ಕೇಂದ್ರ ಸರ್ಕಾರ ದುಡಿಯುವ ಜನರ ಮೇಲೆ ವಾಸ್ತವವಾಗಿ ಗುಲಾಮಗಿರಿಯ ಶರತ್ತುಗಳನ್ನು ಹೇರುತ್ತದೆ ಹಲವಾರು ಕಾರ್ಮಿಕರ ತ್ಯಾಗ ಮತ್ತು ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಹರಣ ಗೊಳಿಸುವ ಮೂಲಕ ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ನಿಗದಿತ ಅವಧಿ ಉದ್ಯೋಗ ಎಂದು ಬಂಡವಾಳ ಶಾಹಿ ವರ್ಗ ಮತ್ತು ಆಧೀನ ಸರ್ಕಾರಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲು ಕಾನೂನುಗಳನ್ನು ಮಾರ್ಪಾಡು ಮಾಡಿಕೊಳ್ಳುತ್ತಿವೆ, ಕಾರ್ಮಿಕರಿಗೆ ಕೆಲಸ ಮಾಡುವ ಅವಧಿ ಕನಿಷ್ಠ ವೇತನ ಸಾಮಾಜಿಕ ಭದ್ರತೆ ಇತ್ಯಾದಿ ಸೇರಿದಂತೆ ಮೂಲಭೂತ ಹಕ್ಕುಗಳಿಗೆ ಮನ್ನಣೆ ನೀಡಬೇಕು ಕಾರ್ಮಿಕರ ಮೇಲೆ ಹೇರ ಹೊರಟಿರುವ ನಾಲ್ಕು ಮಾರಕ ಕಾನೂನುಗಳನ್ನು ರದ್ದು ಪಡಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
 ಕಾರ್ಮಿಕರಿಗೆ ಎಂಟು ಗಂಟೆ ಕೆಲಸದ ಅವಧಿ ನಿಗದಿಗೊಳಿಸಬೇಕು ಕೆಲಸಕ್ಕೆ ವೇತನ ನೀಡಬೇಕು ಸುರಕ್ಷತೆಗೆ ಒತ್ತು ನೀಡಬೇಕು 10 ವರ್ಷ ಕೆಲಸ ಮಾಡಿದ ಕಾರ್ಮಿಕರನ್ನು ಖಾಯಂ ಗೊಳಿಸಬೇಕು ಕನಿಷ್ಠ ವೇತನ 26,000 ದಿಂದ 36,000 ಕ್ಕೆ ಹೆಚ್ಚಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ, ಕೃಷಿ ಮತ್ತು ತೋಟಗಾರಿಕೆ ಕಾರ್ಮಿಕರಿಗೆ, ಬೀಡಿ ಕಾರ್ಮಿಕರಿಗೆ, ಗಿಗ್ ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಕನಿಷ್ಠ ಮಾಸಿಕ 9,000 ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಬೇಕು, ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ ಹಳೆಯ ಪೆನ್ಷನ್ ಸ್ಕೀಮ್ ಓಪಿಎಸ್ ಅನ್ನು ಮರುಸ್ಥಾಪಿಸಬೇಕು ಎಂಬುದು ಸೇರಿದಂತೆ ಸುಮಾರು 22 ಬೇಡಿಕೆಗಳನ್ನು ಇಟ್ಟುಕೊಂಡು ಇಂದು ಸಾರ್ವತ್ರಿಕ ಮಸ್ಕರವನ್ನು ಹಲವು ಕಾರ್ಮಿಕ ಸಂಘಟನೆಗಳ ವತಿಯಿಂದ ನಡೆಸಲಾಯಿತು.
 ಈ ಮುಷ್ಕರದಲ್ಲಿ ಎಐಟಿಯುಸಿ, ಸಿಐಟಿಯು, ಎ ಐ ಯು ಟಿ ಯು ಸಿ, ಐ ಏನ್ ಟಿ ಯು ಸಿ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಮುಖಂಡ ಆದಿ ಮೂರ್ತಿ ಹಾಗೂ ಪದಾಧಿಕಾರಿಗಳು ಮತ್ತು ರೈತ ಸಂಘಗಳ ಮುಖಂಡರಾದ ಸಂಗನಕಲ್ಲು ಕೃಷ್ಣಪ್ಪ, ಕರೂರು ಮಾಧವ ರೆಡ್ಡಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಬ್ಯಾಂಕ್ ನೌಕರರು ಸೇರಿದಂತೆ ಮುಷ್ಕರದಲ್ಲಿ ಸಾವಿರಾರು ಜನ  ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article