ಬಳ್ಳಾರಿ ಸೆ 11: ಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಗೆ ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ ಶ್ರಿ ಹೆಚ್. ಎಸ್. ಸುಧಾಕರ್ ಹೆಗಡೆ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಆಟೋ ಮಂಜು ಜಿಲ್ಲಾ ಪ್ರಧಾನಕಾರ್ಯದರ್ಶಿಯನ್ನಾಗಿ ದೇವರೆಡ್ಡಿ ಯಾದವ್ ಅವರನ್ನು ಆಯ್ಕೆ ಮಾಡಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮಾನ್ಯ ಶ್ಯಾಮ್ ಸುಂದರ್.ಕೆ ರವರು ಆದೇಶಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಕೆ.ಶ್ಯಾಮ್ ಸುಂದರ್ ಅವರು ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆಗೆ ಶ್ರಮ ಪಟ್ಟು ಕೆಲಸ ಮಾಡಬೇಕು ಎಂದು ತಿಳಿಸಿದರು .ನಂತರ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಹೆಚ್. ಎಸ್. ಸುಧಾಕರ್ ಹೆಗಡೆ ಅವರು ನಾನು ಸಂಘದಿಂದ ದುಡಿಯಲು ಬಯಸಿಲ್ಲ ಸಂಘಕ್ಕಾಗಿ ದುಡಿಯಲು ಬಯಸಿ ಈ ಒಂದು ಉನ್ನತ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಕೆ ಪಿ ಹಸೇನ್ ರಾಜ್ಯ ಉಪಾಧ್ಯಕ್ಷ ರಾಜು ತಲಮಾಮಿಡಿ ರಾಜ್ಯ ಮುಖಂಡರಾದ ಹಗರಿ ಗುರು ಪ್ರಸಾದ್ ಸೇರಿದಂತೆ ಉಪಸ್ಥಿತರಿದ್ದರು.