ನೇಗಿನಹಾಳ: ನಮ್ಮ ಗ್ರಾಮ ಸೈನಿಕರು ಮತ್ತು ಶಿಕ್ಷಕರನ್ನು ಅಪಾರವಾಗಿ ನೀಡಿದೆ. ನಾವೆಲ್ಲರೂ ಇಂದು ಕುಟುಂಬ, ಬಂದು-ಬಾಂದವರೊಂದಿಗೆ,
ಸ್ನೇಹಿತರುಸಂಬಂಧಿಕರೊಂದಿಗೆ ಸುಖ, ಸಂತೋಷದಿಂದ ಬದುಕುತ್ತಿದ್ದೇವೆ ಅಂದರೆ ಅದು ನಮ್ಮ ದೇಶದ ಗಡಿ ಕಾಯುವ ಸೈನಿಕರಿಂದ ಅವರ ತ್ಯಾಗ,
ಬಲಿದಾನ, ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಾರೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.\\
ಗ್ರಾಮದ ಬಸನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ನಿಲ್ಲಿಸಿ, ಮಹಿಳೆಯರಿಂದ ಆರತಿ, ಬ್ಯಾಂಡ್ ವಾದ್ಯಗಳ ಮೆರವಣಿಗೆಯ ಮೂಲಕ ಅತ್ಯಂತ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ವೇಧಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ರೈತ ಮತ್ತು ಸೈನಿಕ ಈ ದೇಶದ ಬೆನ್ನೆಲುಬು ಅವರಿಂದಲೇ ನಾವೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದರು.
ನಿವೃತ್ತ ಸೈನಿಕ ಆಗಮಿಸುತ್ತಿರುವ ಹಿನ್ನಲೆ ನಿವೃತ್ತ ಸೈನಿಕರ ಸಂಘದ ಸದಸ್ಯರು ಹತ್ತಾರು ದಿನಗಳಿಂದ ಸಿದ್ಧತೆ ನಡೆಸಿ ಅತ್ಯಂತ ವಿಜ್ರಂಭಣೆಯಿಂದ ಕರೆತಂದರು. ಸುಧೀರ್ಘ ೨೨ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿ ತಮ್ಮ ತಾಯ್ನಾಡಿಗೆ ಆಗಮಿಸಿರುವ ಬಸಪ್ಪ ಮೆಳವಂಕಿ ಅವರಿಗೆ ಸವದತ್ತಿ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ನಿವೃತ್ತ ಸೈನಿಕರ ಸಂಘದ ಸದಸ್ಯರು ಸ್ವಾಗತಿಸಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಸಿದ್ಧಾರೂಢ ಮಠದ ಅದ್ವೈತ ಭಾರತಿ ಮಹಾಸ್ವಾಮಿಗಳು, ಈರಪ್ಪಜ್ಜ ಮಹಾಸ್ವಾಮಿಗಳು, ನಿವೃತ್ತ ಸೈನಿಕರ ಸಂಘದ ಅದ್ಯಕ್ಷ ಅಜೀತ
ಜೈನರ್, ಉಪಾದ್ಯಕ್ಷ ನಾರಾಯಣ ಲೋಕರಿ, ಪುಂಡಲೀಕ ಇಂಗಳಗಿ, ವೈಜನಾಥ ಬೆಳಗಾವಿ, ಮಡಿವಾಳಪ್ಪ ಮಡಿವಾಳರ, ಪಕ್ಕೀರಪ್ಪ ಹಂಚಿನಮನಿ, ಸುಭಾಷ
ರುಮೋಜಿ, ಬಸಪ್ಪ ಮೆಳವಂಕಿ, ಅಮೀರ ಬಸರೀಕಟ್ಟಿ, ಮತ್ತು ವಕೀಲರ ಸಂಘದ ಅಧ್ಯಕ್ಷ ಮಡಿವಾಳಪ್ಪ ಮೆಳವಂಕಿ, ಗ್ರಾ.ಪಂ ಅಧ್ಯಕ್ಷೆ ಮಹಾದೇವಿ ಕೋಟಗಿ
ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.