ಬೆಳಗಾವಿ,ಏ.17: ರಾಮದುರ್ಗ ತಾಲೂಕಿನ ಭಾಗೋಜಿಕೊಪ್ಪ ಗ್ರಾಮದ ಉಜ್ಜಿಯನಿ ಸದ್ಧರ್ಮ ಸಿಂಹಾಸನದ ಶಾಖಾ ಹಿರೇಮಠದ ಶ್ರೀ ಶಿವಯೋಗೀಶ್ವರ ಹಿರೇಮಠದ ಜಾತ್ರಾ ಮಹೋತ್ಸವ ಹಾಗೂ ಗುರುಲಿಂಗಸ್ವಾಮಿಗಳ ಸ್ಮರಣೋತ್ಸವ, ಶ್ರೀ ಶಿವಯೋಗಿಶ್ವರ ಜಾತ್ರಾ ಮಹೋತ್ಸವ ೨೦೨೪ ಜರುಗಲಿದೆ. ಏಪ್ರಿಲ್ 19ರಿಂದ 23ರವರೆಗೆ ಜರುಗಲಿರುವ ಜಾತ್ರಾಮಹೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ನಿತ್ಯವೂ ಶಿವಯೋಗೀಶ್ವರ ಗದ್ದುಗೆಗೆ ಪೂಜೆ, ಮಹಾರುದ್ರಾಭಿಷೇಕ, ಬಿಲ್ವಾರ್ಚಣೆ, ಶ್ರೀ ಶಿವಯೋಗೀಶ್ವರ ವೇದಿಕೆಯಲ್ಲಿ ಖ್ಯಾತ ಪ್ರವಚನಕಾರ ಹೊನವಾಡದ ಬಾಬುಮಹಾರಾಜರಿಂದ ನಿತ್ಯ ಪ್ರವಚನ ನಡೆಯಲಿದೆ.
ಏಪ್ರಿಲ್ 23 ರಂದು ಅಯ್ಯಾಚಾರ ಮತ್ತು ಲಿಂಗದೀಕ್ಷೆ , ಶ್ರೀ ಪತ್ರವನದ ಬಸವೇಶ್ವರ ನಂದಿ ಧ್ವಜ ಕಲಾತಂಡಕ್ಕೆ ನಂದಿ ಪ್ರಶಸ್ತಿ ಕೊಡಲಾಗುತ್ತದೆ. ಶ್ರೀ ಗುರವರೇಣ್ಯ ಗ್ರಾಮೀಣ ವಿದ್ಯಾಪೀಠದಿಂದ ಕೊಡಮಾಡುವ ಡಾ. ಡಿ.ಎಸ್.ಕರ್ಕಿಯವರ ಸವಿನೆನಪಿನಲ್ಲಿ ಭಾಗೋಜಿಕೊಪ್ಪದ ಲಿಂ.ಗುರುಲಿಂಗ ಮಹಾಸ್ವಾಮಿ ಹಿರೇಮಠ, ಚಿಕ್ಕೊಪ್ಪ ಅಂಕಲಿಮಠದ ತ್ರಿವಿಧ ದಾಸೋಹ ಮೂರ್ತಿ ವೀರಭದ್ರಪ್ಪ ಮಹಾಸ್ವಾಮಿ, ಡಾ. ಬಿ.ಮಂಜಮ್ಮ ಜೋಗತಿ ಅವರಿಗೆ 2024ನೇ ಸಾಲಿನ ಕನ್ನಡ ದೀಪ ಪ್ರಶಸ್ತಿ ಕೊಡಲಾಗುತ್ತದೆ.
ಮಾತೋಶ್ರೀ ಶಾಂತಮ್ಮ ಅಮ್ಮನವರಿಗೆ ತುಲಾಭಾರ ಸೇವೆ, ಶ್ರೀಮಠದಿಂದ ವೈದಿಕ ರತ್ನ ಪ್ರಶಸ್ತಿ, ನಿತ್ಯವೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮಠದ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯಾ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.