ಮಲ್ಲಿಗೆ ಸಸಿ ನಾಟಿ ಅಧ್ಯಯನ ಶಿಬಿರ

Ravi Talawar
ಮಲ್ಲಿಗೆ ಸಸಿ ನಾಟಿ ಅಧ್ಯಯನ ಶಿಬಿರ
WhatsApp Group Join Now
Telegram Group Join Now
ಬೈಲಹೊಂಗಲ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ  ತಾಲೂಕಿನ  ಕೊರವಿಕೊಪ್ಪ ಗ್ರಾಮದ ಚಂದನ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ ಅಡಿಯಲ್ಲಿ ಮಲ್ಲಿಗೆ ಸಸಿ ನಾಟಿ ಮಾಡುವ ಮೂಲಕ ಉದ್ಘಾಟನೆ ಆಯೋಜಿಸಲಾಯಿತು.
   ಕಾರ್ಯಕ್ರಮದ ಉದ್ಘಾಟನೆಯನ್ನು  ತಾಲೂಕಿನ  ಯೋಜನಾಧಿಕಾರಿಗಳಾದ  ವಿಜಯಕುಮಾರ,  ಗಣ್ಯರಾದ ನಿಂಗನಗೌಡ  ಗೌಡರ,  ತಾಲೂಕಿನ ಜ್ಞಾನ ವಿಕಾಸ ಸಮನ್ವೇಧಿಕಾರಿ ಶೈಲಾ ಜಕ್ಕಣ್ಣವರ,  ಮೇಲ್ವಿಚಾರಕರಾದ ಜಗದೀಶ, ಕೇಂದ್ರದ ಅಧ್ಯಕ್ಷ    ಸವಿತಾ ಕಲಬಾವಿ   ಇವರ ಸಮ್ಮುಖದಲ್ಲಿ ಮಲ್ಲಿಗೆ ಸಸಿ ನಾಟಿ ಮಾಡುವ ಮೂಲಕ   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
     ಯೋಜನಾಧಿಕಾರಿಗಳಾದ ವಿಜಯಕುಮಾರ ಮಾತನಾಡಿ  ಸೃಜನಶೀಲ ಕಾರ್ಯಕ್ರಮದಲ್ಲಿ ಮಲ್ಲಿಗೆ ಸಸಿ ನಾಟಿ ಕುರಿತು ಮತ್ತು ಜ್ಞಾನ ವಿಕಾಸದ ಕಾರ್ಯಕ್ರಮದ ಅಡಿಯಲ್ಲಿ  ಸ್ವ ಉದ್ಯೋಗ ಮಾಡುವಲ್ಲಿ ಸದಸ್ಯರಿಗೆ   ಕ್ಷೇತ್ರದಿಂದ ನಡೆಯುವಂತ ಕೆಲಸ ಕಾರ್ಯಗಳ ಬಗ್ಗೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಸದಸ್ಯರಿಗೆ ನೀಡುವ ಮಾಹಿತಿ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡು ಕುಟುಂಬ ನಿರ್ವಹಣೆಯಲ್ಲಿ ಹೆಚ್ಚು ಹೆಣ್ಣು ಮಕ್ಕಳ ಜವಾಬ್ದಾರಿ ಇರುವ ಬಗ್ಗೆ ಮಾಹಿತಿ ನೀಡಿ  ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಕೆ ಮಾಡಿದರು.
 ನಿರೂಪಣೆ   ಸೇವಾ ಪ್ರತಿನಿಧಿ ನಿರ್ಮಲಾ ಹಿರೇಮಠ,  ಸ್ವಾಗತ  ಗೀತಾ ಕಲಬಾವಿ  ಒಕ್ಕೂಟದ ಅಧ್ಯಕ್ಷರು  ಮತ್ತು  ಕೇಂದ್ರದ ಸರ್ವ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article