ಹಾರೂಗೇರಿ. ಗ್ರಾಹಕರ ಹಾಗೂ ಷೇರುದಾರರ ಪ್ರೀತಿ ಹಾಗೂ ವಿಶ್ವಾಸ ಜನತಾ ಸಹಕಾರ ಬ್ಯಾಂಕ ಮೇಲೆ ನೀವು ಇಟ್ಟಿರುವ ನಂಬಿಕೆಗೆ ಶಿರಸಾ ವಹಿಸಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಪ್ರಾಮಾಣಿಕ ಕೆಲಸ ಮಾಡಿದ ಪ್ರಯುಕ್ತ ಬ್ಯಾಂಕು 2024-25 ನೇ ಸಾಲಿಗೆ ನಿವ್ವಳ ರೂ. 1.19 ಕೋಟಿ ರೂಪಾಯಿಗಳ ಲಾಭ ಗಳಿಸಿ ಅಪಾರ ಸಾಧನೆ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಪಾಟೀಲ ಹೇಳಿದರು.
ಅವರು ಪಟ್ಟಣದ ಜನತಾ ಸಹಕಾರಿ ಬ್ಯಾಂಕಿನ ಮುಖ್ಯ ಶಾಖೆಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸನ್ 2024-25 ನೇ ಸಾಲಿನ 48 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಅವರ ಬೆಳವಣಿಗೆ ಬ್ಯಾಂಕು ಸದಾ ಬದ್ಧವಾಗಿದ್ದು , ಸದಸ್ಯರ ಸೇವೆಗೆ ಬ್ಯಾಂಕ ಸತತ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ವೃತ್ತಿ ನಿರ್ದೇಶಕರಾದ ಸಿ ಡಿ ಮುಂಗರವಾಡಿ ಮಾತನಾಡಿ ಭಾರತ ಸತತವಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿದ್ದು, ಬಲಿಷ್ಠ 4 ನೇ ಆರ್ಥಿಕವಾಗಿ ಸ್ಥಾನವನ್ನು ಹೊಂದಿದೆ. ತಿಂಗಳಿಗೆ 2 ಲಕ್ಷ ರೂ ಕೋಟಿ ಮೀರಿದ್ದು 2027 ಕ್ಕೆ 3 ನೇ ಬಲಿಷ್ಠ ಆರ್ಥಿಕ ಸ್ಥಾನ ಪಡೆಯಲಿದೆ. ದೇಶದ ಅಭಿವೃದ್ಧಿಗೆ ಸಹಕಾರಿ ಸಂಘಗಳ ಸೇವೆ ಅನನ್ಯವಾಗಿದೆ ಎಂದರು.
ಆಡಳಿತ ವ್ಯವಸ್ಥಾಪನ ಸದಸ್ಯ ಡಾ. ಆರ್ ಸಿ ಗುಡಸಿ ಮಾತನಾಡಿ ಠೇವಣಿ ಇಟ್ಟ ಗ್ರಾಹಕರು ಅಂಜುವ ಪ್ರಶ್ನೆ ಇಲ್ಲಾ ಏಕೆಂದರೆ ಹೆಚ್ಚಿನ ಠೇವಣಿಯನ್ನು ಆರ್ ಬಿ ಐ ನಲ್ಲಿ ಇಡಲಾಗಿದೆ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎಸ್ ಎಸ್ ಅಮರಶೆಟ್ಟಿ ವರದಿ ವಾಚನ ಮಾಡಿ ಮಾತನಾಡಿ ಪ್ರಸಕ್ತ ವರ್ಷ 4747 ಸದಸ್ಯರು ಹೊಂದಿದ್ದು, ರೂ. 211.61 ಕೋಟಿ ದುಡಿಯುವ ಬಂಡವಾಳ, ರೂ. 184.27ಕೋಟಿ ಠೇವಣಿ, ರೂ. 109 ಕೋಟಿ ಗಳ ಸಾಲ ನೀಡಿದ್ದು, 2024-25 ನೇ ಸಾಲಿಗೆ 1.19 ಕೋಟಿ ರೂಪಾಯಿಗಳ ಲಾಭ ಗಳಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ತಮಣ್ಣಪ್ಪ ತೇಲಿ, ಆಡಳಿತ ಮಂಡಳಿ ಸದಸ್ಯರಾದ ಪ್ರಕಾಶ ಕಶೆಟ್ಟಿ, ಸಂಜೀವ ಅವಕ್ಕನವರ, ಜಯಶ್ರೀ ಪಾಟೀಲ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಭಾವಿ, ಭೀಮಗೊಂಡ ಕರ್ಣವಾಡಿ, ಹಣಮಂತ ಮಡಿವಾಳ, ರಾಮಪ್ಪ ನಾಯಕ, ಬಸಗೌಡ ಪಾಟೀಲ, ಎಮ್ ಬಿ ಮಠಪತಿ, ಎಸ್ ಟಿ ತೇಲಿ,ಹಾರೂಗೇರಿ, ರಾಯಭಾಗ, ಯುಗಾರಖುರ್ದ, ಅಥಣಿ ಶಾಖೆಗಳ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಆನಂದ ಗುರವ ಸ್ವಾಗತಿಸಿದರು, ಸುನೀಲ ಕಬ್ಬುರ ನಿರೂಪಿಸಿದರು.ಇದೆ ಸಂದರ್ಭದಲ್ಲಿ ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಪರಿಷತ್ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಡಾ. ವಿ ಎಸ್ ಮಾಳಿ, ಸೇವಾ ನಿವೃತ್ತಿ ಪಡೆದ ಎಸ್ ಕೆ ಕಂಬಾರ, ಇ ಎಚ್ ತಕ್ಕಳಕಿ ಅವರನ್ನು ಸತ್ಕರಸಲಾಯಿತು.