ಬಳ್ಳಾರಿ: 07..ಮೃತ ರಾಜಶೇಖರ ಕೂಡ ನಮ್ಮ ಮನೆಯ ಮೇಲೆ ಬಾಟಲಿ ಎಸೆದಿದ್ದಾನೆ. ಪೊಲೀಸರು ಲಾಠಿ ಚಾರ್ಜ್ ಮಾಡುವ ಸಂದರ್ಭದಲ್ಲಿ ಬೆನ್ನು ಹಿಂದೆ ಗುಂಡು ಹಾರಿಸಲಾಗಿದೆ. ಇದು ಆಕಸ್ಮಿಕವಲ್ಲ, ಉದ್ದೇಶಪೂರ್ವಕ ಕೃತ್ಯ” ಎಂದು ಜನಾರ್ದನ ರೆಡ್ಡಿ ಆರೋಪಿಸಿದರು.
ನಗರದ ಹವಾಂಬಾವಿ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ಧನರೆಡ್ಡಿರವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಆಕಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾನರ್‌ಕಟ್ಟುವ ಬಗ್ಗೆ ನಡೆದ ಸಂಘರ್ಷ ಮುಗಿದ ಮೇಲೆ ಅಂದು ರಾತ್ರಿ ೯.೩೦ರ ಸುಮಾರಿಗೆ ಶಾಸಕ ನಾರಾ ಭರತ್‌ರೆಡ್ಡಿ ಆಗಮಿಸಿ ಪುನಃ ಗಲಾಟೆ ನಡೆಸಿ, ಯಾರನ್ನಾದರೂ ಕೊಂದು ನಮ್ಮ ಮೇಲೆ ಆರೋಪ ಹಾಕಲು ಯತ್ನಿಸಿದರು ಎಂದು ಹೇಳಿದರು. ರಾಜಶೇಖರ ಅವರು ಭರತ್‌ರೆಡ್ಡಿಯ ಟಾಪ್ ಬೆಂಬಲಿಗರಾಗಿದ್ದು, ಗನ್‌ಮ್ಯಾನ್ ಮೂಲಕ ಶೂಟೌಟ್ ನಡೆಸಲಾಗಿದೆ ಎಂದು ಆರೋಪಿಸಿದರು.
“ತಮ್ಮವರನ್ನೇ ಶೂಟ್ ಮಾಡಿಸಿ ದೊಡ್ಡ ಇಶ್ಯೂ ಮಾಡಲು ಹೈಡ್ರಾಮಾ ಮಾಡಿದ್ದಾರೆ. ಇದು ಮಿಸ್‌ಫೈರ್‌ಅಲ್ಲ, ಬೇಕೆಂದೇ ಮಾಡಲಾಗಿದೆ” ಎಂದು ಹೇಳಿದರು. ವಾಲ್ಮೀಕಿ ಸಮುದಾಯ ಅಥವಾ ಇನ್ನಿತರ ಪ್ರಬಲ ಸಮುದಾಯಗಳ ನಡುವೆ ದೊಡ್ಡ ಗಲಾಟೆ ಸೃಷ್ಟಿಸುವ ಉದ್ದೇಶದಿಂದ ಈ ಪ್ಲಾನ್‌ರೂಪಿಸಲಾಗಿತ್ತು ಎಂದು ಆರೋಪಿಸಿದರು.
ಜ.೦೧ರಂದು ರಾತ್ರಿ ನಮ್ಮ ಮನೆಯ ಮುಂದೆ ನಡೆದ ಗಲಾಟೆಯನ್ನು ಪೊಲೀಸರು ತಡೆಯದೇ ಇದ್ದುದ್ದರಿಂದ ನಮ್ಮ ಮನೆಯ ಮೇಲೆ ಕಲ್ಲು ತೂರಲಾಗಿದೆ. ಶಾಸಕರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳುತ್ತಿಲ, ಎಎಸ್ಪಿ ರವಿಕುಮಾರ್‌ಹಾಗೂ ಡಿಎಸ್ಪಿ ಚಂದ್ರಕಾAತ್‌ನAದಾರೆಡ್ಡಿ ವಿರುದ್ಧ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಹಾಗೂ ರಾಜಶೇಖರ ಹತ್ಯೆ ಪ್ರಕರಣದ ಕುರಿತು ಮಿಸ್‌ಫೈರ್‌ಅಲ್ಲ, ಪೂರ್ವಯೋಜಿತ ಕೃತ್ಯ ಎಂದು ಮಾಜಿ ಸಚಿವ ಗಾಲಿ ಜನಾಧÀðನರೆಡ್ಡಿ, ಬಿ.ಶ್ರೀರಾಮುಲು ಗಂಭೀರವಾದ ಆರೋಪ ಮಾಡಿದರು. ದೊಡ್ಡ ಟಿವಿ ಪರದೆಯ ಮೂಲಕ ಘಟನೆಗೆ ಸಂಬAಧಿಸಿದ ವಿಡಿಯೋಗಳನ್ನು ಪ್ರದರ್ಶಿಸಿ, ಕ್ಯಾಮರಾ ಮ್ಯಾನ್‌ಓಂಕಾರ್‌ಎAಬವರಿAದಲೇ ಎಲ್ಲಾ ದೃಶ್ಯಾವಳಿಗಳು ಚಿತ್ರೀಕರಿಸಲಾಗಿದೆ. ನಾಲ್ವರು ಕ್ಯಾಮರಾ ಮ್ಯಾನ್‌ಗಳನ್ನು ನಿಯೋಜಿಸಿ ಎಲ್ಲವನ್ನೂ ಚಿತ್ರಿಸಲಾಗಿದೆ. ಪೆನ್‌ಬಳಸಿ ಟಿವಿ ಪರದೆಯ ಮೇಲೆ ದೃಶ್ಯಗಳನ್ನು ವಿವರಿಸಿದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ೧೭ವರ್ಷ ಸಂವಿಧಾನಿಕ ಹುದ್ದೆಯಲ್ಲಿ ಇದ್ದವರು ಸಿದ್ದರಾಮಯ್ಯ. ಆದರೆ ಅವರ ಕೆಲಸವನ್ನು ಮೀರಿಸಲು ಸಾಧ್ಯವಿಲ್ಲ. ಒಬ್ಬರು ಆಕಾಶ, ಮತ್ತೊಬ್ಬರು ಭೂಮಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ವ್ಯಂಗ್ಯವಾಗಿ ಮಾತನಾಡಿದರು. “ಭರತ್‌ರೆಡ್ಡಿ ಗುಂಪಾಗಿ ಬಂದಾಗ ಲಾಠಿ ಚಾರ್ಜ್ ಆಯಿತು, ಆ ವೇಳೆ ಗುಂಡು ಹಾರಿದೆ. ಪ್ಲಾನ್‌ತಿರುಗಿಸಲು ಹೋಗಿ ಫ್ಲಾಪ್‌ಆಯಿತು. ಈಗ ಎಲ್ಲಾ ವಿಡಿಯೋ ಸಾಕ್ಷಿಗಳು ಲಭ್ಯವಿವೆ” ಎಂದು ಶ್ರೀರಾಮುಲು ತಿಳಿಸಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್‌ರೆಡ್ಡಿಯವರ ಆಪ್ತ ಸತೀಶ್‌ರೆಡ್ಡಿ ಗನ್‌ಮ್ಯಾನ್‌ನಿಂದಲೇ ಗುಂಡು ಹಾರಿದೆ. ಪ್ರಮುಖ ಆರೋಪಿಗಳಾದ ಭರತ್‌ರೆಡ್ಡಿ ಹಾಗೂ ಸತೀಶ್‌ರೆಡ್ಡಿ ಬೆಂಬಲಿಗರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಒತ್ತಾಯಿಸಿದರು.
ಬಳ್ಳಾರಿ ನಗರದಲ್ಲಿ ಜ.೧ರಂದು ನಡೆದ ಅಹಿತಕರ ಘಟನೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ನಿರ್ಧಾರವನ್ನು ಬಿಜೆಪಿ ಕೋರ್‌ಕಮಿಟಿಯಲ್ಲಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬಿಜೆಪಿ ಪಕ್ಷದ ವತಿಯಿಂದ ಬಳ್ಳಾರಿ ನಗರದಲ್ಲಿ ಭಾರೀ ಪ್ರತಿಭಟನೆ ಮತ್ತು ಸಮಾವೇಶವನ್ನು ಜನವರಿ ೧೭ರಂದು ಹಮ್ಮಿಕೊಳ್ಳಲಾಗುವುದು ಎಂದು ಜನಾರ್ದನ ರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಸಣ್ಣ ಫಕೀರಪ್ಪ, ಬುಡಾದ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್, ಕೆ.ಎಸ್.ದಿವಾಕರ್, ಜಿ.ಟಿ.ಪಂಪಾಪತಿ, ಸೇರಿದಂತೆ ಮತ್ತಿತರೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಇದ್ದರು.


