ಬಳ್ಳಾರಿ. ಸೆ. 22..: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಸಮೀಕ್ಷೆ ಹಿಂದೂ ಸಮಾಜವನ್ನು ಒಡೆಯುವ ಡರ್ಟಿ ಪಾಲಿಟಿಕ್ಸ್ ಎಂದು ಜನಾರ್ದನ್ ರೆಡ್ಡಿ ವ್ಯಂಗ್ಯವಾಡಿದರು .
ಅವರು ಇಂದು ಬಿಜೆಪಿಯ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕವಾದ ಜಾತಿ ಜನಗಣತಿಯನ್ನು ನಡೆಸುತ್ತಿದೆ ಪ್ರತಿಯೊಂದು ಜಾತಿಯಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಲಾಗುತ್ತಿದೆ ಇದು ಯಾವ ಹಿಂದುಗಳು ಸಹಿಸಲು ಸಾಧ್ಯವಿಲ್ಲ. ಹಿಂದೂ ಜೊತೆಗಿನ ಕ್ರಿಶ್ಚಿಯನ್ ಧರ್ಮವನ್ನು ಜಾತಿ ಜನಗಣತಿಯಿಂದ ಕೈ ಬಿಡಬೇಕೆಂದು ಮಾಜಿ ಸಚಿವ ಹಾಲಿ ಶಾಸಕ ಜಿ ಜನಾರ್ದನ್ ರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ 1400 ಜಾತಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ನೀಡಿದೆ , ಇದರ ಪ್ರಕಾರ ಕುರುಬ ಕ್ರಿಶ್ಚಿಯನ್ ಲಿಂಗಾಯತ ಕ್ರಿಶ್ಚಿಯನ್ ಒಕ್ಕಲಿಗ ಕ್ರಿಶ್ಚಿಯನ್ ಮಾದಿಗ ಕ್ರಿಶ್ಚಿಯನ್ ಬಂಜಾರ ಕ್ರಿಶ್ಚಿಯನ್ ಸೇರಿದಂತೆ 48 ಅನಧಿಕೃತ ಕ್ರೈಸ್ತ ಜಾತಿಗಳನ್ನು ಸೇರಿಸಿ ಕ್ರಿಶ್ಚಿಯನ್ ಮೂಲದ ಸೋನಿಯಾ ಗಾಂಧಿಯನ್ನು ಮೆಚ್ಚಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಇದು ರಾಜ್ಯ ಜನತೆಗೆ ಮಾಡುವ ದ್ರೋಹ ಎಂದ ರೆಡ್ಡಿ ಈ ಅವಜ್ಞಾನಿಕ ಜಾತಿ ಸಮೀಕ್ಷೆ ಕೈಬಿಡಬೇಕು, ಇಲ್ಲವಾದಲ್ಲಿ ಸರ್ಕಾರ ತೀವ್ರವಾದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಜನರ ಭಾವನೆ ಜೊತೆಗೆ ಚೆಲ್ಲಾಟ ಆಡಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಬುದ್ಧಿಯನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೈಜ್ಞಾನಿಕವಾದ ಜಾತಿ ಸಮೀಕ್ಷೆಗೆ ನಮ್ಮ ಅಭ್ಯಂತರವಿಲ್ಲ ಸಮೀಕ್ಷೆ ನಡೆಸುವ ಅಧಿಕಾರಿಗಳಿಗೆ ಉತ್ತಮ ತರಬೇತಿಯನ್ನು ನೀಡಿ ಉತ್ತಮ ರೀತಿಯ ಜಾತಿ ಸಮೀಕ್ಷೆಯನ್ನು ನಡೆಸಬೇಕೆಂದರು. ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಬುಡ ಅಧ್ಯಕ್ಷ ಗುರು ಲಿಂಗನಗೌಡ,


