ಬಳ್ಳಾರಿ ಸೆ 08.ಬಳ್ಳಾರಿ ತಾಲ್ಲೂಕಿನ ಶಿಡಿಗಿನಮೊಳ ಗ್ರಾಮದ ಹೊರ ವಲಯದಲ್ಲಿರುವ ಜಾನಕಿ ಕಾರ್ಪ್ ಲಿಮಿಟೆಡ್ ಕೈಗಾರಿಕೆಯವರು ಶಿಡಿಗಿನಮೊಳ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳು ಹಾಗೂ ಗ್ರಾಮಸ್ಥರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ಶಿಡಿಗಿನಮೊಳ ಗ್ರಾಮಸ್ಥರು ಹಾಗೂ ಗ್ರಾ.ಪಂ. ಸದಸ್ಯರು ತಿಿಳಿಸಿದ್ದಾರೆ.ಆದರೆ ಕೆಲ ಕಿಡಿಗೇಡಿಗಳು ವಿನಾಕಾರಣ ಜಾನಕಿ ಕಾರ್ಪ್ ಲಿಮಿಡೆಟ್ ಶಿಡಿಗಿನಮೊಳ ಇವರ ವಿರುದ್ದ ದೂರು ಸಲ್ಲಿಸುತ್ತಿದ್ದು, ಸದರಿ ದೂರುಗಳನ್ನು ಪರಿಗಣಿಸಬಾರದೆಂದು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸವಿವರವಾದ ಮನವಿ ಪತ್ರವನ್ನು ಸಲ್ಲಿಸಿರುವ ಅವರು, ಬಳ್ಳಾರಿ ಜಿಲ್ಲೆ, ಶಿಡಿಗಿನಮೊಳ ಗ್ರಾಮದ ಸಾರ್ವಜನಿಕರು, ಹಾಗೂ ಗ್ರಾಮಸ್ಥರು ಹಾಗೂ ಗ್ರಾಮಪಂಚಾಯತಿ ಸದಸ್ಯರು, ಶಿಡಿಗಿನಮೊಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕೈಗಾರಿಕೆಯವರು ನಮ್ಮ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳು ಹಾಗೂ ಗ್ರಾಮಸ್ಥರಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಆದರೆ ಕೆಲ ಕಿಡಿಗೇಡಿಗಳು ವಿನಾಕಾರಣ ಜಾನಿಕಿ ಕಾರ್ಪ್ ಪ್ರವೇಟ್ ಅಮಿಟೆಡ್ ಶಿಡಿಗಿನಮೊಳ ಇವರ ವಿರುದ್ದು ದೂರುಗಳನ್ನು ಪದೇ ಪದೇ ಸಲ್ಲಿಸುತ್ತಿದ್ದು, ಸದರಿ ಜಾನಕಿಯವರು ಶಿಡಿಗಿನಮೊಳ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಈಗಾಗಲೇ ಸಾಕಷ್ಟು ಸೌಲಭ್ಯಗಳನ್ನು ಹಾಗೂ ಸಹಾಯ ಹಸ್ತ ನೀಡುತ್ತಾ ಸಹಕಾರವನ್ನು ಕೊಡುತ್ತಾ ಬಂದಿರುತ್ತಾರೆ ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ.
ಸುತ್ತ ಮುತ್ತ ಯಾವುದೇ ವ್ಯಕ್ತಿಗಳು ಗ್ರಾಮದಲ್ಲಿ ಮರಣ ಹೊಂದಿದರೆ ಅವರ ಅಂತ್ಯಸಂಸ್ಕಾರಕ್ಕೆ 5 ಸಾಾವಿರ ರೂ.ಗಳನ್ನು ನೀಡುತ್ತಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಶೂ, ನೋಟ್ ಪುಸ್ತಕಗಳನ್ನು ಪ್ರತಿವರ್ಷ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ. ಗ್ರಾಮದ ಶೌಚಾಲಯ ನಿರ್ಮಾಣದಾರರಿಗೆ ಪ್ರತಿ ಮನೆಗೆ ಶೌಚಾಲಯಕ್ಕೆ ಕೈಗಾರಿಕೆಯಿಂದ 3 ಸಾವಿರ ರೂ. ಸಹಾಯಧನ ನೀಡುತ್ತಿದ್ದಾರೆ, ಪಶುಗಳ ಆರೋಗ್ಯದಲ್ಲಿ ತೊಂದರೆಯಾದ ಸಮಯದಲ್ಲಿ ಗ್ರಾಮದ ಪಶುಗಳಿಗೆ ಉಚಿತ ಲಸಿಕೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಸಹ ಕೊಡಿಸಿರುತ್ತಾರೆ. ಹಾಗೂ ಶಾಲೆಯ ಅಭಿವೃದ್ಧಿ ಹಾಗೂ ಸ್ವಚ್ಚತೆ ಮತ್ತು ಬಣ್ಣ ಸುಣ್ಣ ಮಾಡಿಸುವುದಕ್ಕಾಗಿ ಇಂತಿಷ್ಟು ದೇಣಿಗೆ ನೀಡುತ್ತಿದ್ದಾರೆ. ಹಾಗೂ ಹೆಚ್ಚಿನ ಹಾಗೂ ತುರ್ತು ಸೇವೆಗಳಿಗೆ ಒಂದು ಅಂಬ್ಯುಲೆನ್ಸ್ 24×7 ಸೇವೆಯನ್ನು ಒದಗಿಸುತ್ತಿದ್ದಾರೆ.
ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ ಪ್ರತಿ ವರ್ಷ ಇಂತಿಷ್ಟು ದಾನ ರೂಪದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ವಿಶೇಷವಾಗಿ ಪ್ರತಿ ವರ್ಷ ಮೊಹರಂ ಹಬ್ಬಕ್ಕೆ ಸಹ ಕೈಗಾರಿಕೆ ಪ್ರಾರಂಭಗೊಂಡಾಗಿನಿಂದಲೂ ಅನುದಾನವನ್ನು ನೀಡುತ್ತಾ ಬಂದಿರುತ್ತಾರೆ.ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಸ್ವಚ್ಚತೆ ಸೌಲಭ್ಯಗಳನ್ನು ಸಹ ಒದಗಿಸಿಕೊಟ್ಟಿರುತ್ತಾರೆ.
ಅದು ಅಲ್ಲದೇ ಯಾರಿಗಾದರೂ ಹೆಚ್ಚಿನ ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಕೈಗಾರಿಕೆಯಿಂದ ಸಾಧ್ಯವಾದಷ್ಟು ಅನುದಾನವನ್ನು ನೀಡುತ್ತಿದ್ದಾರೆ. ಹಾಗೂ ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳಿಗೆ ವೈದ್ಯಕೀಯ ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹ ಅರ್ಥಿಕ ನೆರವು ನೀಡುತ್ತಿದ್ದಾರೆ ಅದು ಅಲ್ಲದೇ ಮುಖ್ಯವಾಗಿ ಗ್ರಾಮದ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಗ್ರಾಮಗಳಲ್ಲಿ ಸೋಲಾರ್ ವಿದ್ಯುತ್, ಹಾಗೂ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಅವಶ್ಯಕವಾದಲ್ಲಿ ಅವರ ಕೈಗಾರಿಕೆಯಿಂದ ಕಾರ್ಯಗಳನ್ನು ಮಾಡುತ್ತಿದ್ದಾರೆ.
ವಿಶೇಷವಾಗಿ ಚರಂಡಿ ಹಾಗೂ ಕಸ 3 ಸ್ವಚ್ಚತಾ ಸಿಬ್ಬಂದಿಗಳಾಗಿ ಕೈಗಾರಿಕೆ ವತಿಯಿಂದ ಶಿಡಿಗಿನಮೊಳ,ಮೀನಹಳ್ಳಿ ಗ್ರಾಮಕ್ಕೆ ಕಾರ್ಮಿಕರನ್ನು ನೇಮಿಸಿ ಕೈಗಾರಿಕೆಯವರ ವೇತನ ನೀಡುತ್ತಿದ್ದಾರೆ. ಶಿಡಿಗಿನಮೊಳ ಗ್ರಾಮದ ಪ್ರೌಢಶಾಲೆಗೆ 1 ಕಾವಲುಗಾರ ಹಾಗೂ ಆಸ್ಪತ್ರೆಗೆ 1 ಕಾವಲಗಾರನ್ನು ತಮ್ಮ ಕೈಗಾರಿಕೆಯಿಂದ ನೇಮಿಸಿ ಅವರಿಗೆ ವೇತನ ನೀಡುತ್ತಿದ್ದಾರೆ.
ಗ್ರಾಮದಲ್ಲಿ ಅತ್ಯಂತ ಕಡುಬಡವರಿಗೆ ಆಹಾರ್ ಕಿಟ್ ಗಳನ್ನು ಸಹ ವಿತರಣೆ ಮಾಡುತ್ತಿದ್ದಾರೆ. ಅಂಗವಿಕಲರು ಹಾಗೂ ದುಡಿಯುವ ಚೈತನವಿಲ್ಲದ ಹಿರಿಯ ನಾಗರೀಕರು ಸಹ ಇಂತಿಷ್ಟು ಆಹಾರ ಧಾನ್ಯ ಹಾಗೂ ಆರ್ಥಿಕ ನೆರವು ಸಹ ನೀಡುತ್ತಿದ್ದಾರೆ. ಗ್ರಾಮಪಂಚಾಯತಿ ಹೊಸ ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಹ ಸಾಕಷ್ಟು ಸಹಕಾರ ನೀಡಿರುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಚರಷೆಗೆ ಸಹಾಯಧನ ನೀಡುತ್ತಿದ್ದಾರೆ.
ಕನಕದಾಸ ಜಯಂತಿಗೆ ಕೈಗಾರಿಕೆಯಿಂದ ಸಹಾಯಧನ, ವಾಲ್ಮೀಕಿ ಜಯಂತಿಗೆ ಕೈಗಾರಿಕೆಯಿಂದ ಸಹಾಯಧನ, ಗಣೇಶಮೂರ್ತಿಯನ್ನು ಕೂಡಿಸುವುದಕ್ಕೆ ಸಹ ಅನುದಾನವನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಗ್ರಾಮದ ಬನಶಂಕರಿ ಜಾತ್ರೆ, ಓಂಕಾರೇಶ್ವರ ಜಾತ್ರ, ಕೊಟ್ರಬಸವೇಶ್ವರ ಜಾತ್ರೆಗೆ ವಿಶೇಷ ಅನುದಾನ ಹಾಗೂ ಹೂವು ಹಾಗೂ ಅಲಂಕಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಸಹ ನೀಡಿರುತ್ತಾರೆ. ಕೃಷಿ ನಂಬಿರುವ ಗ್ರಾಮಕ್ಕೆ ಸದರಿ ಕೈಗಾರಿಕೆ ಹಾಕಿದ ಸಮಯದಿಂದಲೂ ಇಲ್ಲಿಯವರೆಗೆ ಒಂದಲ್ಲಾ ಒಂದು ರೀತಿಯಲ್ಲಿ ಸಾಕಷ್ಟು ನೆರೆವು ನೀಡುತ್ತಿರುವ ನೂರಾರು ಕುಟುಂಬಗಳಿಗೆ ಉದ್ಯೋಗ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಾಕಷ್ಟು ಅನುಕೂಲ ಕಲ್ಪಿಸಿದ್ದು, ಇಂತಹ ಮಾನವೀಯತೆವುಳ್ಳ ಕೈಗಾರಿಕೆಯವರು ಇನ್ನೂ ಇಂತಹ ಹೆಚ್ಚಿನ ಕೈಗಾರಿಕೆಗಳನ್ನು ಪ್ರಾರಂಭಿಸಬೇಕೆಂದು ಅವರು ಹೇಳಿದ್ದಾರೆ.
ಮಾನವೀಯತೆ ಇರುವ ಕೈಗಾರಿಕೆ ವಿರುದ್ಧ ತಮಗೆ ಯಾವುದೇ ಹಣ ನೀಡಿಲ್ಲ ಎಂಬ ವೈಯುಕ್ತಿಕ ವಿಚಾರವನ್ನು ಮನದಲ್ಲಿಟ್ಟುಕೊಂಡು ವಿನಾಕಾರಣ ತಮ್ಮ ಕಛೇರಿಗೆ ಸದರಿ ಕೈಗಾರಿಕೆ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಈ ರೀತಿ ಕೈಗಾರಿಕೆ ಮೇಲೆ ದೂರು ಸಲ್ಲಿಸುತ್ತಿರುವ ವ್ಯಕ್ತಿಗಳು ತಮ್ಮ ಬಂಡವಾಳ ಬೇಯಿಸಿಕೊಳ್ಳುವುದಕ್ಕೆ ಈ ರೀತಿಯಾಗಿ ದೂರು ಸಲ್ಲಿಸುತ್ತಿದ್ದಾರೆ. ಇಂತಹ ಸುಳ್ಳು ದೂರುಗಳಿಗೆ ಬೆಲೆ ಕೊಡಬಾರದೆಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಶಿಡಿಗಿನಮೊಳ ಗ್ರಾಮದ ಮುಖಂಡರಾದ ಬಿ.ಚೆನ್ನಬಸವನಗೌಡ, ತಿಮ್ಮಯ್ಯ, ಅಂಜಿನಯ್ಯ, ಶಿವರಾಜ್, ನರಸಿಂಹ, ಕಿರಣ್ಕುಮಾರ್, ಗಂಗಾಧರ ಎಸ್., ಸುಂಕಯ್ಯ, ರಾಜ್ಕುಮಾರ್, ಗಣೇಶ್ಬಾಬು, ಎಂ.ಗಂಗಾಧರ, ಓಬಳೇಶ್, ಹಾಗೂ ಹಿರಿಯ ಧುರೀಣರಾದ ಮೀನಳ್ಳಿ ವೆಂಕಟೇಶ್ ಸೇರಿದಂತೆ ಶಿಡಿಗಿನಮೊಳ ಗ್ರಾಮಸ್ಥರು ಹಾಗೂ ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.