Ad imageAd image

ವಿಧಾನಸಭೆ ಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ನನ್ನ ಜತೆ ಸಂಧಾನ ಮಾಡಿಕೊಂಡಿದ್ರು: ಜನಾದರ್ನ ರೆಡ್ಡಿ ಸ್ಫೋಟಕ ಹೇಳಿಕೆ!

Ravi Talawar
ವಿಧಾನಸಭೆ ಎಲೆಕ್ಷನ್​ನಲ್ಲಿ ಸಿದ್ದರಾಮಯ್ಯ ನನ್ನ ಜತೆ ಸಂಧಾನ ಮಾಡಿಕೊಂಡಿದ್ರು: ಜನಾದರ್ನ ರೆಡ್ಡಿ ಸ್ಫೋಟಕ ಹೇಳಿಕೆ!
WhatsApp Group Join Now
Telegram Group Join Now

ಕೊಪ್ಪಳ, ಮೇ 01: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು. ನಾನು ಕೆಆರ್​ಪಿಪಿ ಪಕ್ಷ ಕಟ್ಟಿದಾಗ ಹತ್ತು ಸ್ಥಾನ ನಮ್ಮ ಪಕ್ಷ ಗೆಲ್ಲುತ್ತೆ ಎಂದು ಕಾಂಗ್ರೆಸ್ ನವರು ಅಂದುಕೊಂಡಿದ್ದರು. ಹೀಗಾಗಿ ಚುನಾವಣೆಗೂ ಮುನ್ನವೇ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು ಎಂದು ಜನಾದರ್ನ ರೆಡ್ಡಿ  ಹೊಸ ಬಾಂಬ್ ಸಿಡಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿಂದು ಮಾತನಾಡಿರುವ ರೆಡ್ಡಿ, ಚುನಾವಣೆ ಮುನ್ನ ಇಬ್ಬರಿಗೂ ಬೇಕಾಗಿದ್ದ ಓರ್ವ ಕಾಮನ್ ಫ್ರೆಂಡ್ ನನ್ನು ಕಳುಹಿಸಿದ್ದರು. ಹಳೆಯದೆಲ್ಲವನ್ನು ಮರೆತು ಬಿಡೋಣ, ನಾನು ಗಂಗಾವತಿಗೆ(ಜನಾರ್ದನ ರೆಡ್ಡಿ ಪ್ರತಿನಿಧಿನಿಸಿದ್ದ ಕ್ಷೇತ್ರ) ಹೋಗಿ ಪ್ರಚಾರ ಮಾಡಲ್ಲ. ರೆಡ್ಡಿ ಬಗ್ಗೆ ಎಲ್ಲಿಯೂ ಮಾತನಾಡಲ್ಲ ಎಂದು ಸಿದ್ದರಾಮಯ್ಯ ಹೇಳಿ ಕಳುಹಿಸಿದ್ದರು. ಹೀಗಾಗಿಯೇ ಸಿದ್ದರಾಮಯ್ಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಮತ್ತು ಬಳ್ಳಾರಿ ನಗರಕ್ಕೆ ಪ್ರಚಾರಕ್ಕೆ ಬಂದಿರಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು. ನಾನು ಕೆಆರ್​ಪಿಪಿ ಪಕ್ಷ ಕಟ್ಟಿದಾಗ ಹತ್ತು ಸ್ಥಾನ ನಮ್ಮ ಪಕ್ಷ ಗೆಲ್ಲುತ್ತೆ ಎಂದು ಕಾಂಗ್ರೆಸ್ ನವರು ಅಂದುಕೊಂಡಿದ್ದರು. ಮುಂದೆ ನಮ್ಮ ಸರ್ಕಾರ ರಚೆನೆಗೆ ರೆಡ್ಡಿ ಬೇಕಾಗಬಹುದು ಎಂದು ಸಂಧಾನ ಮಾಡಿಕೊಂಡಿದ್ದರು. ಚುನಾವಣೆ ಮುನ್ನ ಇಬ್ಬರಿಗೂ ಬೇಕಾಗಿದ್ದ ಓರ್ವ ಕಾಮನ್ ಪ್ರೆಂಡ್ ನನ್ನು ಕಳುಹಿಸಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಾನು ರೆಡ್ಡಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದೇನೆ. ಹಳೆಯದೆಲ್ಲವನ್ನು ಮರೆತು ಬಿಡೋಣ. ನಾನು ಗಂಗಾವತಿಗೆ ಹೋಗಿ ಪ್ರಚಾರ ಮಾಡಲ್ಲ. ರೆಡ್ಡಿ ಬಗ್ಗೆ ಎಲ್ಲಿಯೂ ಮಾತನಾಡಲ್ಲ ಎಂದು ಸಿದ್ದರಾಮಯ್ಯ ಹೇಳಿ ಕಳುಹಿಸಿದ್ದರು. ಹೀಗಾಗಿಯೇ ಸಿದ್ದರಾಮಯ್ಯ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಮತ್ತು ಬಳ್ಳಾರಿ ನಗರಕ್ಕೆ ಪ್ರಚಾರಕ್ಕೆ ಬಂದಿರಲಿಲ್ಲ. ಆದ್ರೆ ನಿನ್ನೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೆಚ್ಚಿಸಲು ನನ್ನ ಬಗ್ಗೆ ಎರಡು ಮಾತು ಆಡಿದ್ದಾರೆ. ನನಗೆ ಸಿದ್ದರಾಮಯ್ಯ ಮೇಲೆ ಸಿಟ್ಟಿಲ್ಲ. ನಾನು ದೇವರ ಮೇಲೆ ಪ್ರಮಾಣ ಮಾಡಲ್ಲ. ಆದ್ರೆ, ನನ್ನ ಮೇಲೆ ನಾನೇ ಪ್ರಮಾಣ ಮಾಡಿಕೊಂಡ ಹೇಳುತ್ತಿದ್ದೇನೆ ಇವರೆಲ್ಲರು ಚುನಾವಣೆ ಸಮಯದಲ್ಲಿ ನನ್ನ ಜೊತೆ ಅಡ್ಜಸ್ಟ್ ಆಗಿದ್ದರು ಎಂದು ಹೇಳಿದರು. ಈ ಮೂಲಕ ಗಾಲಿ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಜನಾರ್ದನ ರೆಡ್ಡಿ ಅವರ ಈ ಸಂಧಾನ ಆರೋಪ ಮಾಡಿರುವ ಹಿಂದೆ ರಾಜಕೀಯ ತಂತ್ರ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ್ದ ಇಕ್ಬಾಲ್ ಅನ್ಸಾರಿ ಸೋಲುಕಂಡಿದ್ದರು. ಜನಾರ್ದನ ರೆಡ್ಡಿ ಗೆಲುವು ಸಾಧಿಸಿದ್ದರು. ಇನ್ನು ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಗಂಗಾವತಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿರಲಿಲ್ಲ. ಇದಾದ ಬಳಿಕ ಇಕ್ಬಾಲ್ ಅನ್ಸಾರಿ ತಮ್ಮ ಸೋಲಿಗೆ ನಮ್ಮ ಪಕ್ಷದ ಕೆಲ ಮುಖಂಡರು, ನಾಯಕರುಗಳು ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು. ಈಗ ರೆಡ್ಡಿ, ಸಿದ್ದರಾಮಯ್ಯ ನನ್ನ ಜೊತೆ ಸಂಧಾನ ಮಾಡಿಕೊಂಡಿದ್ದರು ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಪ್ರತಿ ಚುನಾವಣೆ ಸಂದರ್ಭದಲ್ಲೂ ಕರ್ನಾಟಕದಲ್ಲಿ ಒಳ ಒಪ್ಪಂದ ಅಂದರೆ ಹೊಂದಾಣಿಕೆ ರಾಜಕೀಯ ಸದ್ದು ಮಾಡುತ್ತದೆ. ಅದರಲ್ಲೂ ಹೆಚ್ಚಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಹೊಂದಾಣಿಕೆ ರಾಜಕಾರಣದ ಬಗ್ಗೆ ಪದೇ ಪದೇ ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಮಾತನಾಡಿದ್ದಾರೆ. ಅಲ್ಲದೇ ಒಂದಾಣಿಕೆ ರಾಜಕಾರಣದ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ನೇರಾನೇರ ಆರೋಪ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಈಗಿನ ವಿಧಾನಸಭಾ ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧವೂ ಸಹ ಹೊಂದಾಣಿಕೆ ರಾಜಕಾರಣ ಆರೋಪ ಕೇಳಿಬಂದಿತ್ತು.

ಈ ಹೊಂದಾಣಿಕೆ, ಒಳ ಒಪ್ಪಂದ ರಾಜಕಾರಣದ ಬಗ್ಗೆ ಬೇರೆ ಬೇರೆ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಅಧಿವೇಶನದ ಕಲಾಪದಲ್ಲೂ ಈ ಹೊಂದಾಣಿಕೆ ರಾಜಕಾರಣದ ಬಗ್ಗೆ ಸುದೀರ್ಘ ಚರ್ಚೆಯಾಗಿತ್ತು.

WhatsApp Group Join Now
Telegram Group Join Now
Share This Article