ಜಮ್ಮು-ಕಾಶ್ಮೀರ27: ಇಲ್ಲಿ ಅನೇಕ ಬದಲಾವಣೆಗಳು ಆಗುತ್ತಿದೆ. ಹಿಂಸೆಗಳನ್ನು ಕಾಣುತ್ತಿದ್ದ ಈ ರಾಜ್ಯದಲ್ಲಿ ಶಾಂತಿ, ಧಾರ್ಮಿಕ ಬದಲಾವಣೆಗಳು ಆಗುತ್ತಿದೆ. ಇದೀಗ ಇಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಮಾಡಲು ಇಲ್ಲಿನ ಜನ ಮುಂದಾಗಿದ್ದಾರೆ.
ಹೌದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ದೇಶದ ಅತ್ಯಂತ ಪುರಾತನ ಸೂರ್ಯ ದೇವಾಲಯವನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ. ಅನಂತನಾಗ್‌ನಲ್ಲಿ ನಿರ್ಮಿಸಲಾದ ಈ ಸೂರ್ಯ ದೇವಾಲಯವನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ದೇವಾಲಯಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಇದರ ಮೊದಲ ಸಭೆಯಲ್ಲಿ ದೇವಾಲಯ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವ ತಿರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಮಾರ್ತಾಂಡ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಹುದಿನಗಳಿಂದ ಬೇಡಿಕೆ ಇತ್ತು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನರು ದೇವಾಲಯದ ಪುನರ್ ನಿರ್ಮಾಣಕ್ಕೆ ಅಭಿಯಾನ ಕೂಡ ನಡೆಸಿದರು ಎಂದು ಹೇಳಲಾಗಿದೆ. ಈ ದೇವಾಲಯವು ಶ್ರೀನಗರದಿಂದ ಸುಮಾರು 63 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವನ್ನು ಕ್ರಿ.ಶ.750 ರಲ್ಲಿ ರಾಜ ಲಾಲಿದಾದಿತ್ಯ ನಿರ್ಮಿಸಿದ್ದ, ಇದು ದೇಶದ ಹಳೆಯ ಪರಂಪರೆಗಳಲ್ಲಿ ಇದೂ ಒಂದಾಗಿದ್ದು, ಇದೀಗ ಇದನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ.
ಈ ಸೂರ್ಯ ದೇವಾಲಯವು ಕಾಶ್ಮೀರಿ ವಾಸ್ತುಶಿಲ್ಪದ ಸೌಂದರ್ಯವನ್ನು ಒಳಗೊಂಡಿದೆ. ಈ ದೇವಾಲಯದ ನಿರ್ಮಾಣದಲ್ಲಿ ಕಂಧಾರ, ಚೈನೀಸ್ ಮತ್ತು ಗುಪ್ತ ರೋಮನ್ ಶೈಲಿಗಳನ್ನು ಬಳಸಲಾಗಿದೆ. ದೇವಾಲಯವು 270 ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಅಗಲ 180 ಅಡಿ ಇದೆ. ಇದರ ಜತೆಗೆ ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಮಾರ್ತಾಂಡ ದೇವಾಲಯವು ಎಎಸ್‌ಐ ಸಂರಕ್ಷಿತ ತಾಣಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಸೂರ್ಯನಿಗೆ ಇಂದು ಪೂಜೆ ನಡೆಯುತ್ತಿಲ್ಲ ಎಂದು ಸಮಿತಿ ಹೇಳಿದೆ. ಗುಜರಾತ್ ಮತ್ತು ಒಡಿಶಾದಲ್ಲೂ ಸೂರ್ಯ ದೇವಾಲಯಗಳು ಸಹ ಎಎಸ್‌ಐ ಸಂರಕ್ಷಿತ ದೇವಾಲಯಗಳಾಗಿವೆ ಹಾಗೂ ಇಲ್ಲಿನ ಸೂರ್ಯ ದೇವಾಲಯಗಳಲ್ಲಿ ಪೂಜೆ ಮಾಡಲಾಗುತ್ತದೆ.