ಬೆಂಗಳೂರು :ಸಮಾಜದಲ್ಲಿ ಶಿಕ್ಷಣ ಅಗತ್ಯ ವಾಗಿದ್ದು ನಾನು ಅಲ್ಪಸಂಖ್ಯಾತರ ಕಲ್ಯಾಣ ಸಚಿವನಾದ ನಂತರ ಶಿಕ್ಷಣ ಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇನೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಚಾಮರಾಜಪೇಟೆಯ ಅಬ್ಬಾಸ್ ಖಾನ್ ಕಾಲೇಜಿನ ಘಟಿಕೋತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣ ದಿಂದ ವಂಚಿತ ರಾಗ ಬಾರದು ಜತೆಗೆ ಹೆಚ್ಚಿನ ಸಂಖ್ಯೆ ಯಲ್ಲಿ ಉನ್ನತ ಶಿಕ್ಷಣ ಪಡೆಯ ಬೇಕು ಎಂಬ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಜೆಟ್ ನ ಶೇ. 50 ರಷ್ಟು ಶಿಕ್ಷಣ ಕ್ಕೆ ಮೀಸಲಿಡಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ಮತ್ತು ಪ್ರಾಢಶಾಲೆ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉನ್ನತ ಶಿಕ್ಷಣ ಪಡೆಯುವ ಮಕ್ಕಳಿಗೆ ವಿದ್ಯಾರ್ಥಿ ವೇತನದ ನೆರವು ಜತೆಗೆ ಸಾಲ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೋಟಿ ಕೋಟಿ ಹಣ ಇದ್ದರೂ ಶಿಕ್ಷಣ ಇಲ್ಲದಿದ್ದರೆ ಏನೂ ಪ್ರಯೋಜನ ಆಗುವುದಿಲ್ಲ. ವಿದ್ಯಾವಂತ ರಾದರೆ ಹಣ, ಅಂತಸ್ತು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.
ಬಹುಮಾನ
ಇದೇ ಸಂದರ್ಭದಲ್ಲಿ ಶೇ. 97 ಕ್ಕಿಂತ ಹೆಚ್ಚು ಅಂಕ ಪಡೆದ 6 ಟಾಪರ್ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಾಗಿ ಒಂದು ಲಕ್ಷ ರೂ. ನಗದು, ಹಾಗೂ ದ್ವಿಚಕ್ರ ವಾಹನ ಹಾಗೂ ಶೇ. 95 ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ಬಹುಮಾನ ನೀಡಿದರು.
ಕೆಎಂ ಡಿಸಿ ಅಲ್ತಾಫ್ ಖಾನ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಫಾರೂಕ್ ಮೊಹಮ್ಮದ್, ಉನ್ನತ ಶಿಕ್ಷಣ ಕೌನ್ಸಿಲ್ ವಿಶೇಷ ಅಧಿಕಾರಿ ರಮೇಶ್, ಪ್ರಿನ್ಸಿಪಾಲ್ ವಿದ್ಯಾ ಉಪಸ್ಥಿತರಿದ್ದರು.