ಬೆಂಗಳೂರು : ‘ಬೊನ್ ಮ್ಯಾರೋ ಟ್ರಾನ್ಸ್ ಪಲೆಂಟ್ ‘ ಕಾಯಿಲೆ ಯಿಂದ ಬಳಲುತ್ತಿದ್ದ ಎಚ್. ಡಿ. ಕೋಟೆಯ ಹಿರೇಹಳ್ಳಿಯ ಎನ್. ಚೆಲುವಪ್ಪ ಪುತ್ರ ಗಗನ್ ಗೌಡ ಎಂಬ ಒಂಬತ್ತು ವರ್ಷದ ಬಾಲಕ ನಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ವೈಯಕ್ತಿಕವಾಗಿ ಐದು ಲಕ್ಷ ರೂ. ವೈದ್ಯಕೀಯ ನೆರವು ನೀಡಿದರು.
ಬಾಲಕನ ವೈದ್ಯಕೀಯ ಚಿಕಿತ್ಸೆಗೆ 35 ಲಕ್ಷ ರೂ. ಅಗತ್ಯವಿದ್ದು,ಎಚ್. ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮೂಲಕ ನೆರವಿಗಾಗಿ ಬೆಂಗಳೂರಿಗೆ ಬಂದಿದ್ದ ಬಾಲಕ ಗಗನ್ ಗೌಡ ಹಾಗೂ ಆತನ ತಂದೆ ಚೆಲುವಪ್ಪ ಅವರನ್ನು ವಿಕಾಸ ಸೌಧ ಕಚೇರಿಗೆ ಕರೆಸಿಕೊಂಡ ಸಚಿವರು ಐದು ಲಕ್ಷ ರೂ. ನೀಡಿದರು.
ಶಾಸಕರಾದ ಗಣೇಶ್, ಅಸೀಫ್ ಸೇಠ್, ಭರತ್ ರೆಡ್ಡಿ, ಕೆ ಎಂ ಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ್ ಉಪಸ್ಥಿತರಿದ್ದರು.