ಜಮಖಂಡಿ ಜ್ಞಾನದ ದಿವ್ಯಶಕ್ತಿಯಾಗಿ ಗುರುತಿಸಿಕೊಂಡಿದೆ: ಬಿಇಓ

Pratibha Boi
ಜಮಖಂಡಿ ಜ್ಞಾನದ ದಿವ್ಯಶಕ್ತಿಯಾಗಿ ಗುರುತಿಸಿಕೊಂಡಿದೆ: ಬಿಇಓ
WhatsApp Group Join Now
Telegram Group Join Now
ಜಮಖಂಡಿ: ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಇರತಕ್ಕ ಸರಕಾರಿ ಶಾಲೆಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ. ತಾಲೂಕಿನ ೫೮೦ ಸರಕಾರಿ ಶಾಲೆಗಳಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಜಮಖಂಡಿ ತಾಲೂಕು ಜಿಲ್ಲೆಗೆ ಪ್ರಥಮಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಹೇಳಿದರು.
ನಗರದ ಬಸವಭವನ ಸಭಾಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಶಿಕ್ಷಕ ವಿವಿಧ ಸಂಘಟನೆಗಳು, ತಾಲೂಕಾ ಸರಕಾರಿ ನೌಕರರ ಸಂಘ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಬೆಂಗಳೂರ ಸಹಯೋಗದಲ್ಲಿ ಸರ್ವಪಲ್ಲಿ ಡಾ.ರಾಧಾಕೃಷ್ಣನರ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಜಮಖಂಡಿ ತಾಲೂಕು ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ವೇದಿಕೆಯಾಗಿದೆ. ಶಿಕ್ಷಣ, ಕ್ರೀಡೆ, ಸಾಹಿತ್ಯ, ನೀರಾವರಿ ಎಲ್ಲ ಕ್ಷೇತ್ರದಲ್ಲಿ ಮುಂದಿದೆ. ಸರಕಾರ ಯಾವುದೇ ಹುದ್ದೆಗಳ ನೇಮಕಾತಿಯಲ್ಲಿ ಜಮಖಂಡಿ ತಾಲೂಕಿನ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಜಮಖಂಡಿ ತಾಲೂಕು ಜ್ಞಾನದ ದಿವ್ಯಶಕ್ತಿಯಾಗಿ ಗುರುತಿಸಿಕೊಂಡಿದೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೀ ಗುರುದೇವ ರಾನಡೆ, ಸಾಹಿತ್ಯದಲ್ಲಿ ಸತ್ಯಕಾಮ, ಕ್ರೀಡೆಯಲ್ಲಿ ಕುರಣಿ ಸಹಿತ ಹಲವರು ದೇಶದಲ್ಲಿ ಗುರುತಿಸಿ ಕೊಂಡಿದ್ದಾರೆ ಎಂದರು.
ತಹಶೀಲ್ದಾರ ಅನೀಲ ಬಡಿಗೇರ ಮಾತನಾಡಿ, ಪ್ರತಿ ವಿದ್ಯಾರ್ಥಿಗೆ ಓರ್ವ ಶಿಕ್ಷಕ ಆದರ್ಶಪ್ರಾಯರಾಗಿರುತ್ತಾರೆ. ವಿದ್ಯಾರ್ಥಿಯ ಜೀವನದ ದಿಕ್ಕು ಬದಲಿಸುವ ಶಕ್ತಿ ಶಿಕ್ಷಕರಲ್ಲಿ ಮಾತ್ರ ಸಾಧ್ಯವಿದೆ. ಶಿಕ್ಷಕರ ಪರಿಶ್ರಮದ ಶಿಕ್ಷಣದಿಂದ ದೇಶದ ಅಭಿವೃದ್ಧಿ ಆಗಲಿದೆ. ಬದಲಾವಣೆಗೆ ತಕ್ಕಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬದಲಾವಣೆ ಅಳವಡಿಕೊಳ್ಳ ಬೇಕು. ಶಿಕ್ಷಕ ವೃತ್ತಿಯಲ್ಲಿ ಲಭಿಸುವ ತೃಪ್ತಿ ಯಾವುದೇ ಹುದ್ದೆಯಲ್ಲಿ ಲಭಿಸಲು ಸಾಧ್ಯವಿಲ್ಲ. ಶಿಕ್ಷಕ ವೃತ್ತಿ ದೇಶದಲ್ಲಿ ಪವಿತ್ರ ಹುದ್ದೆಯಾಗಿದೆ. ನಾನು ಮೊದಲು ಶಿಕ್ಷಕನಾಗಿ ವೃತ್ತಿ ಆರಂಭಿಸಿದ ನಂತರ ಈಗ ತಹಶೀಲ್ದಾರನಾಗಿ ನೇಮಕ ಆಗಿದ್ದೇನೆ. ಆದರೇ ಶಿಕ್ಷಕ ವೃತ್ತಿಯಲ್ಲಿ ಲಭಿಸಿದ ಸಂತೋಷ ಈ ಹುದ್ದೆಯಲ್ಲಿ ಇಲ್ಲ ಎಂದರು.
ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಅಧ್ಯಕ್ಷ, ಲೇಖಕ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ರೈತರು ಮತ್ತು ಶಿಕ್ಷಕರು ಇಲ್ಲದೇ ಜೀವನ ಸಾಗಿಸಲು ಸಾಧ್ಯವಿಲ್ಲ. ರೈತರು ಇರದಿದ್ದರೇ ಬದುಕು ನಡೆಸಲು ಸಾಧ್ಯವಿಲ್ಲ. ಶಿಕ್ಷಣ ಇಲ್ಲದಿದ್ದರೇ ಶೋಷಣೆ ತಡೆಯಲು ಸಾಧ್ಯವಿಲ್ಲ ಎಂದರು.
ಓಲೇಮಠದ ಪ.ಪೂ.ಆನಂದೇವರು ಸಾನಿಧ್ಯ ವಹಿಸಿ ಆರ್ಶೀವದಿಸಿದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ರೇಖಾ ಕಾಂಬಳೆ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಾಗೆನ್ನವರ, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಂ.ಕೋಲೂರ, ತಾಲೂಕಾ ದೈಹಿಕ ಶಿಕ್ಷಣ ಪರೀವಿಕ್ಷಕ ಪಂಚಾಕ್ಷರಿ ನಂದೇಶ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಿ.ಎಸ್.ಕಲ್ಯಾಣಿ, ನಿವೃತ್ತ ಹಿರಿಯ ಉಪನ್ಯಾಸಕ ಸಿ.ಎಂ.ನ್ಯಾಮಗೌಡ, ಪಿ.ಬಿ.ಅಜ್ಜನವರ, ಸಿ.ಜಿ.ಕಡಕೋಳ, ನರಸಿಂಹ ಕಲ್ಲೋಳ್ಳಿ, ಲಕ್ಷö್ಮಣ ಬಡಿಗೇರ, ಸಂತೋಷ ತಳಕೇರಿ, ಭೂಷಣ ಪತ್ತಾರ, ಎಸ್.ಎಸ್.ಭೋಸಲೆ, ಮಹೇಶ ಜೋಶಿ, ಎಂ. ಎನ್.ಹುಂಡೇಕಾರ, ಎ.ಜಿ.ಕರಡಿ, ಎಂ.ಎಸ್.ಬಡಿಗೇರ, ಜಗದೀಶ ಮೇತ್ರಿ ಸಹಿತ ಹಲವರು ಇದ್ದರು.
ಇದೇ ಸಂದರ್ಭದಲ್ಲಿ ಪ್ರಸಕ್ತವರ್ಷದಲ್ಲಿ ವಯೋನಿವೃತ್ತಿ ಹೊಂದಿರುವ ತಾಲೂಕಿನ ಶಿಕ್ಷಕ-ಶಿಕ್ಷಕಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಶಿಕ್ಷಕಿ ಪಿ.ಎಸ್.ಕಟ್ಟಿಮನಿ ಮತ್ತು ಸಂಗಡಿಗರು ನಾಡಗೀತೆ, ರೈತಗೀತೆಯೊಂದಿಗೆ ಪ್ರಾರ್ಥಿಸಿದರು.
WhatsApp Group Join Now
Telegram Group Join Now
Share This Article