ಐಟಿ ಕಂಪನಿಗಳಿಗೆ ಅಗತ್ಯ ನೀರು ಪೂರೈಕೆ: ಜಲ ಮಂಡಳಿ ಭರವಸೆ!

Ravi Talawar
ಐಟಿ ಕಂಪನಿಗಳಿಗೆ ಅಗತ್ಯ ನೀರು ಪೂರೈಕೆ: ಜಲ ಮಂಡಳಿ ಭರವಸೆ!
WhatsApp Group Join Now
Telegram Group Join Now

ಬೆಂಗಳೂರು, ಮಾರ್ಚ್ 29: ಬೆಂಗಳೂರು ನಗರದಲ್ಲಿರುವ ಎಲ್ಲ ಐಟಿ ಕಂಪನಿಗಳಿಗೆ ಸಾಕಷ್ಟು ನೀರು ಪೂರೈಸಲಾಗುವುದು. ಈ ವಿಚಾರದಲ್ಲಿ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭರವಸೆ ನೀಡಿದೆ.

ಮನೆಯಿಂದಲೇ ಕೆಲಸದ ಬೇಡಿಕೆ ಮತ್ತು ನೀರಿನ ಬಿಕ್ಕಟ್ಟಿನಿಂದಾಗಿ ಅನೇಕ ಐಟಿ ಕಂಪನಿಗಳು ನೆಲೆಯನ್ನು ಬದಲಾಯಿಸಲು ನೆರೆಯ ರಾಜ್ಯಗಳಿಂದ ಆಹ್ವಾನ ಸ್ವೀಕರಿಸುತ್ತಿವೆ ಎಂಬ ವದಂತಿಗಳ ಬೆನ್ನಲ್ಲೇ, ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಗುರುವಾರ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದೊಂದಿಗೆ ಸಭೆ ನಡೆಸಿದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ನಗರದಲ್ಲಿರುವ ಐಟಿ ಕಂಪನಿಗಳಿಗೆ ಸಾಕಷ್ಟು ನೀರು ದೊರೆಯುವಂತೆ ಮಾಡಲಿದ್ದೇವೆ. ನಗರದಾದ್ಯಂತ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಕಂಪನಿಗಳಿಗೆ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಂಪನಿಗಳು ನೀರನ್ನು ಎಚ್ಚರಿಕೆಯಿಂದ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅನಗತ್ಯ ಉದ್ದೇಶಗಳಿಗಾಗಿ ನೀರಿನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಬೆಂಗಳೂರಿನ ನೀರಿನ ಬಿಕ್ಕಟ್ಟಿನಿಂದಾಗಿ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಬೇಕೆಂದು ನಗರದ ಅನೇಕ ಐಟಿ ಉದ್ಯೋಗಿಗಳು ಮನವಿ ಮಾಡಿದ್ದರು. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಗರದಲ್ಲಿ ಸುಮಾರು 15ಲಕ್ಷ ಐಟಿ ಉದ್ಯೋಗಿಗಳಿದ್ದು, ವರ್ಕ್ ಫ್ರಮ್ ಹೋಮ್ ನೀಡುವುದರಿಂದ ಸುಮಾರು 10 ಲಕ್ಷ ಜನ ಅವರ ಊರುಗಳಿಗೆ ತೆರಳುವ ಸಾಧ್ಯತೆ ಇದೆ. ಇದರಿಂದ ನಗರದ ನೀರಿನ ಒತ್ತಡ ಕಡಿಮೆ ಮಾಡಬಹುದು ಎಂದು ಇತ್ತೀಚೆಗೆ ತಜ್ಞರು ಹೇಳಿದ್ದರು.

 

 

 

WhatsApp Group Join Now
Telegram Group Join Now
Share This Article