ಬೆಳಗಾವಿ.ದೇಶದ ಅಭಿವೃದ್ಧಿಗೆ ಹಾಗೂ ಸ್ವಂತ ಬೆಳವಣಿಗೆಗೆ ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಎಲ್ಲಾ ಉತ್ಪನ್ನಗಳನ್ನು ನಾವು ಬಳಕೆ ಮಾಡಿ ಅವುಗಳ ವ್ಯಾಪಾರ ವಹಿವಾಟು ಮಾಡಿ ತಮ್ಮ ಬೆಳವಣಿಗೆಗೆ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಶುಕ್ರವಾರದಂದು ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದ ಅಂಗವಾಗಿ
ಬೆಳಗಾವಿ ನಗರದ ಸರ್ಕಿಟ್ ಹೌಸ್ ದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಮಾತನಾಡಿ ದೇಶಿಯ ವಸ್ತುಗಳ ಬಳಕೆ ನಾವು ರೂಡಿಸಿಕೊಳ್ಳಬೇಕು ಈ ಕಾರ್ಯದಿಂದ ದೇಶದ ಪ್ರಧಾನಿ ನರೇಂದ್ರ ಮೋಧೀಜಿ ಅವರ ಭವ್ಯ ಭಾರತದ ಕನಸು ನನಸು ಆಗುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಜಯ ಪಾಟೀಲ, ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ,ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕರಾದ ಮಹೇಶ್ ಮೋಹಿತೆ,ಸಹ ಸಂಚಾಲಕರಾದ ವಿಜಯ ಗುಡದೇರಿ, ಯಲ್ಲೇಶ ಕೊಲಕಾರ, ರಾಜಶೇಖರ್ ಡೋಣಿ, ಮುರುಘೇಂದ್ರಗೌಡ ಪಾಟೀಲ,ಧನ್ಯಕುಮಾರ ಪಾಟೀಲ,ಸಚೀನ ಕಡಿ, ಸುಭಾಷ್ ಸಣ್ಣವೀರಪ್ಪನವರ, ಮನೋಜ್ ಪಾಟೀಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು ಇದೇ ವೇಳೆ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನದ ವಿಶೇಷ “ಟಿ ಶರ್ಟಗಳನ್ನು” ಗಣ್ಯರು ಬಿಡುಗಡೆ ಗೊಳಿಸಿದರು.