ಹಸಿರು ಕ್ರಾಂತಿ: ಎಂ. ಕೆ. ಹುಬ್ಬಳ್ಳಿ :ಸಮೀಪದ ಇಟಗಿ ಗ್ರಾಮದಲ್ಲಿ ಈಚೆಗೆ ನಡೆದ ಗ್ರಾಮ ಪಂಚಾಯತಿ ನೂತನ ಕಟ್ಟಡಮತ್ತು ಸಭಾ ಭವನ ಉದ್ಘಾಟನಾ ಸಮಾರಂಭದಲ್ಲಿ ಇಟಗಿ ಗ್ರಾಮ ಪಂಚಾಯತಿಯ ಸಿಬ್ಬಂದಿಯನ್ನು ಶಾಸಕ ವಿಠ್ಠಲ ಹಲಗೇಕರ ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಚನ್ನಬಸವ ದೇವರು, ಚನ್ನವೀರ ದೇವರು, ಗ್ರಾ ಪಂ ಅಧ್ಯಕ್ಷ ರುದ್ರಪ್ಪ ತುರಮರಿ, ಉಪಾಧ್ಯಕ್ಷೆ ರಾಜಶ್ರೀ
ಹುಣಶಿಕಟ್ಟಿ, ಪಿ ಡಿ ಓ ವಿರೇಶ ಸಜ್ಜನ ಹಾಗೂ ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.