ಬೈಲಹೊಂಗಲ: ಭಾರತದ ಶಕ್ತಿಯನ್ನು ವಿಶ್ವಕ್ಕೆ ತಿಳಿಸಿ1998 ರಲ್ಲಿ ವಿಶ್ವದ ದೊಡ್ಡಣ್ಣ ಅಮೇರಿಕಾ ದೇಶಕ್ಕೆ ಸೆಡ್ಡು ಹೊಡೆದು ಅಣು ಬಾಂಬ್ ಪರೀಕ್ಷೆ ನಡೆಸಿ ಭಾರತ ಪರಮಾಣು ಶಕ್ತಿ ಹೊಂದಿದ ದೇಶ ಎಂದು ತೋರಿಸಿಕೊಟ್ಟ ಭಾರತಮಾತೆಯ ಹೆಮ್ಮೆಯ ಸುಪುತ್ರ ಅಜಾತ ಶತೃ ಅಟಲಬಿಹಾರಿ ವಾಜಪೇಯಿ ಅವರನ್ನು ದೇಶದ ಜನ ಸದಾ ಅವರ ಸ್ಮರಣೆಯಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಸಮೀಪದ ಹೊಸೂರ ಗ್ರಾಮದಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ 101ನೆ ಜನ್ಮದಿನದ ನಿಮಿತ್ಯ ಸುಶಾಸನ ದಿನಾಚರೆನೆ ನೆರೆವೆರಿಸಿ ಮಾತನಾಡಿ, ಸರಳ ಸಜ್ಜನಿಕೆಯ ಕಾರ್ಯಕರ್ತರ ಹೃದಯ ಸಾಮ್ರಾಟ ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ, ಭಾರತ ರತ್ನ ವಿಭೂಷಿತ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು.1951ರ ಅನಂತರ ಸಕ್ರಿಯ ರಾಜಕಾರಣ ಪ್ರವೇಶಿಸಿದ ವಾಜಪೇಯಿಯವರು ಡಾ. ಶ್ಯಾಮಪ್ರಸಾದ ಮುಖರ್ಜಿಯವರ ನಿಕಟವರ್ತಿ-ಆಪ್ತ ಕಾರ್ಯದರ್ಶಿಯಾಗಿ. ಜನಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.
ರಾಜಕೀಯ ಬದಲಾವಣೆಯಲ್ಲಿ 1980ರಲ್ಲಿ ಜನತಾಪಕ್ಷವನ್ನು ತೊರೆದು ಭಾರತೀಯ ಜನತಾ ಪಾರ್ಟಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿ ಅಧ್ಯಕ್ಷರಾಗಿದ್ದರು.
ತಮ್ಮ ಅಧಿಕಾರವಧಿಯಲ್ಲಿ ಪಕ್ಕದ ಪಾಕಿಸ್ತಾನ ಭಾರತದ ನಡುವೆ ಸೌಹಾರ್ದವನ್ನು ವೃದ್ಧಿಸುವ ಆಶಾಭಾವನೆಯಿಂದ ಭಾರತ-ಪಾಕಿಸ್ತಾನಗಳ ನಡುವೆ 1999 ರಲ್ಲಿ ಬಸ್ ಪ್ರಯಾಣವನ್ನು ಪ್ರಾರಂಭಿಸಿದರು. ಅದರೆ ಪಾಕಿಸ್ತಾನ ಕುತಂತ್ರ ನಡೆಸಿದ್ದರಿಂದ ಕಾರ್ಗಿಲ್ ಯುದ್ಧ ಸಂಭವಿಸಿ ಭಾರತ ವಿಜಯಿಯಾಯಿತು.
ಕೆಳಮನೆಗೆ ಹತ್ತು ಬಾರಿ ಮತ್ತು ಮೇಲ್ಮನೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾದ ಅವರು ನಾಲ್ಕು ದಶಕಗಳ ಕಾಲ ಭಾರತೀಯ ಸಂಸತ್ ಸದಸ್ಯರಾಗಿ ದಾಖಲೆ ಸೃಷ್ಟಿಸಿದ್ದ ವಾಜಪೇಯಿಜೀ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದ ಇವರು 19ರಲ್ಲಿ ನಿಧನರಾದರು.
ಕಾರ್ಯಕ್ರಮದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡಲಾಯಿತು. ಮಂಡಲ ಯುವ ಮೊರ್ಚಾ ಉಪಾಧ್ಯಕ್ಷ ಗೌಡಪ್ಪ ಹೊಸಮನಿ ಬಿಜೆಪಿ ಕಾರ್ಯಕರ್ತರಾದ ನಾಗರಾಜ ಬುಡಶೆಟ್ಟಿ, ಗುರುಶಾಂತ ಮುತವಾಡ, ಉಳವಪ್ಪ ಬುಡಶೆಟ್ಟಿ, ಮಂಜುನಾಥ ಹೊಸಮನಿ ಮುಂತಾದವರು ಇದ್ದರು.


