ರೋಗಿಯ ದೌರ್ಬಲ್ಯವನ್ನೇ ಅಸ್ತ್ರವನ್ನಾಗಿಸಿಕೊಂಡು ಲೈಂಗಿಕ ಕಿರುಕುಳ ನೀಡುವುದು ತಪ್ಪು; ಹೈಕೋರ್ಟ್​​

Ravi Talawar
ರೋಗಿಯ ದೌರ್ಬಲ್ಯವನ್ನೇ ಅಸ್ತ್ರವನ್ನಾಗಿಸಿಕೊಂಡು ಲೈಂಗಿಕ ಕಿರುಕುಳ ನೀಡುವುದು ತಪ್ಪು; ಹೈಕೋರ್ಟ್​​
WhatsApp Group Join Now
Telegram Group Join Now

ಬೆಂಗಳೂರು: ವೈದ್ಯರಾದವರಿಗೆ ರೋಗಿಗಳ ಆರೋಗ್ಯ ಪರಿಶೀಲಿಸಲು ಇರುವ ಅಧಿಕಾರ ಅತ್ಯಂತ ಶ್ರೇಷ್ಠದ್ದಾಗಿದ್ದು, ಅದನ್ನು ರೋಗ ಗುಣಪಡಿಸಲು ಮಾತ್ರವೇ ಬಳಸಬೇಕು ಎಂದು ಎಚ್ಚರಿಸಿರುವ ಹೈಕೋರ್ಟ್, ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವೈದ್ಯರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿದೆ.

ತಮ್ಮ ವಿರುದ್ಧದ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮೂಲದ ಬೆಂಗಳೂರು ನಿವಾಸಿಯಾಗಿರುವ ಡಾ.ಎಸ್.ಚೇತನ್‌ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ವೈದ್ಯ ವೃತ್ತಿಯಲ್ಲಿ ಇರುವವರಿಗೆ ರೋಗಿಯ ಆರೋಗ್ಯವನ್ನು ಪರಿಶೀಲನೆ ನಡೆಸುವುದಕ್ಕೆ ಅವಕಾಶವಿದೆ. ಅದೊಂದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಅದನ್ನು ರೋಗವನ್ನು ಗುಣಪಡಿಸುವ ಉದ್ದೇಶಕ್ಕೆ ಮಾತ್ರ ಬಳಸುವಂತಿರಬೇಕು. ದುರುದ್ದೇಶಪೂರ್ವಕವಾಗಿ ಬಳಕೆ ಮಾಡಿದಲ್ಲಿ ಅದು ಐಪಿಸಿ 354ಎ ಅಡಿ ಲೈಂಗಿಕ ಕಿರುಕುಳ ನೀಡಿದಂತಾಗಲಿದೆ ಎಂದು ಪೀಠ ತಿಳಿಸಿದೆ.

ಯಾವುದೇ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿರುವ ಸಂದರ್ಭಗಳಲ್ಲಿ ಮಾತ್ರ ವೈದ್ಯರಲ್ಲಿಗೆ ಬರುತ್ತಾರೆ ಎಂಬ ಅಂಶವನ್ನು ವೈದ್ಯರಾದವರು ಗಮನದಲ್ಲಿಟ್ಟುಕೊಳ್ಳಬೇಕು. ರೋಗಿಯನ್ನು ಪರೀಕ್ಷೆಗೆ ಗುರಿಪಡಿಸುವ ವೈದ್ಯರಿಗೆ ಇರುವ ಅಧಿಕಾರವು ಲೈಂಗಿಕ ಶೋಷಣೆಗೆ ಅವಕಾಶಕ್ಕೆ ಕಾರಣವಾಗಬಹುದು ಎಂದು ಪೀಠ ಹೇಳಿದೆ.

WhatsApp Group Join Now
Telegram Group Join Now
Share This Article