ಕನ್ನಡ ಸಂಸ್ಕೃತಿ  ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯ

A B
By A B
ಕನ್ನಡ ಸಂಸ್ಕೃತಿ  ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯ
WhatsApp Group Join Now
Telegram Group Join Now
ಬಳ್ಳಾರಿ,ಮಾ.14:..: ಕನ್ನಡ ನಾಡು ಸ್ವರ್ಗದ ಬೀಡು, ಕನ್ನಡ ನೆಲದಲ್ಲಿ ಹುಟ್ಟುವುದೇ ಪೂರ್ವ ಜನ್ಮದ ಪುಣ್ಯದ ಫಲ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದರು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಳ್ಳಾರಿ ಬಿಜಿನೆಸ್ ಕಾಲೇಜಿನಲ್ಲಿ ಇಂದು ಹಮ್ಮಿಕೊಂಡಿದ್ದ ದಿ. ಗಾಲಿ ರುಕ್ಮಿಣಮ್ಮ ಮತ್ತು ದಿ. ಗಾಲಿ ಚೆಂಗಾರೆಡ್ಡಿ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಂಸ್ಕೃತಿ ವಿಶ್ವ ಮಾನ್ಯ ಸಂಸ್ಕೃತಿಯಾಗಿದೆ ಅದನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸೋಮಶೇಖರ್ ರೆಡ್ಡಿಯವರು ತಿಳಿಸಿದರು. ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಕುರಿತು ಕಿರುತೆರೆ ಹಾಸ್ಯ ಕಲಾವಿದ ಎ. ಎರ್ರಿಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.
ಬಳ್ಳಾರಿ ಬಿಜಿನೆಸ್ ಕಾಲೇಜಿನ ನಿರ್ದೇಶಕರು, ಕಿಷ್ಕಿಂಧ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಅಮರರಾಜ್ ಭೂಪಾಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ತಮ್ಮ ಸಂಸ್ಥೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತದೆ. ದತ್ತಿ ದಾನಿಗಳಿಂದ ಉಪಯುಕ್ತ ಮಾಹಿತಿ ಲಭ್ಯವಾಗುತ್ತದೆ ಎಂದರು.
ಪ್ರಾAಶುಪಾಲರಾದ ಡಾ. ಎಂ. ರಾಮಚಂದ್ರ , ಖ್ಯಾತ ವೈದ್ಯರಾದ ಡಾ. ರೇಣುಕಾ ಮಂಜುನಾಥ, ನಗರ ಪಾಲಿಕೆ ಸದಸ್ಯರುಗಳಾದ ಗುಡಿಗಂಟೆ ಹನುಮಂತ, ಕೆ. ಹನುಮಂತಪ್ಪ, ಮಾನವ ಬಂಧುತ್ವ ವೇದಿಕೆಯ ಹೆಚ್. ರವಿಕುಮಾರ್,   ಜ್ಯೋತಿ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ರಂಗ ಕಲಾವಿದರಾದ ರಮೇಶ್ ಗೌಡ ಪಾಟೀಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಚರಣೆ ನಡೆಸಲಾಯಿತು.
ಕಾರ್ಯಕ್ರಮವನ್ನು ಉಪನ್ಯಾಸಕಿ ಕೆ. ಸರ್ವಮಂಗಳಾ ಕಾರ್ಯಕ್ರಮ ನಿರೂಪಿಸಿದರು.  ಉಪನ್ಯಾಸಕರಾದ ಪ್ರಭಾಕರ್ ಜೋಶಿ ಸ್ವಾಗತಿಸಿದರು.
WhatsApp Group Join Now
Telegram Group Join Now
Share This Article