ಇಸ್ರೋ ನೌಕೆ ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲೇ ನೌಕೆ ಇಳಿಸಿದ ಚೀನಾ

Ravi Talawar
ಇಸ್ರೋ ನೌಕೆ ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲೇ ನೌಕೆ ಇಳಿಸಿದ ಚೀನಾ
WhatsApp Group Join Now
Telegram Group Join Now

ಬೀಜಿಂಗ್‌ (ಜೂ.3): ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಚಂದ್ರಯಾನ ನೌಕೆ 3 ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲಿ ಇದೀಗ ಚೀನಾ ಕೂಡಾ ತನ್ನ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ಮೇ 3ರಂದು ಹಾರಿಬಿಡಲಾಗಿದ್ದ ‘ಚಾಂಗ್‌ ಇ-6’ ನೌಕೆ, ಭಾನುವಾರ ಚೀನಾ ಕಾಲಮಾನ ಬೆಳಗ್ಗೆ 6.23ಕ್ಕೆ ಪೂರ್ವ ನಿಗದಿತ ಅಪೋಲೋ ಬೇಸಿನ್‌ ಎಂಬ ಸ್ಥಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ನೌಕೆಯು ಆರ್ಬಿಟರ್‌, ರಿಟರ್ನರ್‌, ಲ್ಯಾಂಡರ್‌ ಮತ್ತು ಅಸೆಂಡರ್‌ ಎಂಬ 4 ಉಪಕರಣಗಳನ್ನು ಹೊಂದಿದೆ.

ಈ ನೌಕೆಯು ಸೂರ್ಯನ ಬೆಳಕೇ ಬೀಳದ, ಎಂದಿಗೂ ಭೂಮಿಯಿಂದ ನೋಡಲಾಗದ ಪ್ರದೇಶದಿಂದ ಕಲ್ಲು, ಮಣ್ಣಿನ ಮಾದರಿ ಸಂಗ್ರಹಿಸಿ ಅದನ್ನು ಭೂಮಿಗೆ ತರಲಿದೆ. ಈ ಪ್ರದೇಶದಿಂದ ಕಲ್ಲು ಮಣ್ಣು ಭೂಮಿಗೆ ತರುತ್ತಿರುವ ಮೊದಲ ಉದಾಹರಣೆ ಇದಾಗಿದೆ. ಚಂದ್ರನ ದಕ್ಷಿಣದ ಧ್ರುವದ ಮೇಲೆ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತಕ್ಕಿದೆ. ಇಸ್ರೋ ತನ್ನ ಪ್ರಜ್ಞಾನ್‌ ನೌಕೆಯನ್ನು ಅಲ್ಲಿ ಇಳಿಸಿತ್ತು.

 

WhatsApp Group Join Now
Telegram Group Join Now
Share This Article