ಗಾಜಾ ಮೇಲೆ ಇಸ್ರೇಲ್‌ ದಾಳಿ; 50 ಮಂದಿ ಹತ್ಯೆ

Ravi Talawar
ಗಾಜಾ ಮೇಲೆ ಇಸ್ರೇಲ್‌ ದಾಳಿ; 50 ಮಂದಿ ಹತ್ಯೆ
WhatsApp Group Join Now
Telegram Group Join Now

ಗಾಜಾ: ನಿನ್ನೆ ಮಧ್ಯರಾತ್ರಿಯಿಂದ ಪ್ಯಾಲೆಸ್ತೀನ್ ಪ್ರದೇಶ ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಜನರು ಸಾವನ್ನಪ್ಪಿದ್ದಾರೆ. ಉತ್ತರ ಗಾಜಾ ಪಟ್ಟಿಯಲ್ಲಿರುವ ನಾಗರಿಕರ ಮನೆಗಳನ್ನು ಮಧ್ಯರಾತ್ರಿ ಮತ್ತು ಬೆಳಗಿನ ಜಾವದ ನಡುವೆ ಗುರಿಯಾಗಿಸಿ ಇಸ್ರೇಲಿ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಸಂಖ್ಯೆ 50 ಕ್ಕೆ ಏರಿದೆ.ನಮ್ಮ ತಂಡಗಳು ಇನ್ನೂ ಆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ” ಎಂದು ಗಾಜಾದ ನಾಗರಿಕ ರಕ್ಷಣಾ ಅಧಿಕಾರಿ ಮೊಹಮ್ಮದ್ ಅಲ್-ಮುಘಯ್ಯಿರ್ ಸುದ್ದಿಸಂಸ್ಥೆ AFP ಗೆ ತಿಳಿಸಿದ್ದಾರೆ.

ಆಸ್ಪತ್ರೆಗೆ ಸೇರಿಸಲಾಗಿದ್ದ 30 ಮಂದಿ ಸಾವನ್ನಪ್ಪಿದ್ದಾರೆ. ಡಜನ್ ನಷ್ಟು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಮಹಿಳೆಯರು, ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ಬೀಟ್ ಲಾಹಿಯಾದಲ್ಲಿರುವ ಇಂಡೋನೇಷ್ಯಾದ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article