ಗಾಜಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿ; 65 ಸಾವು, 320 ಮಂದಿಗೆ ಗಾಯ

Ravi Talawar
ಗಾಜಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿ; 65 ಸಾವು, 320 ಮಂದಿಗೆ ಗಾಯ
WhatsApp Group Join Now
Telegram Group Join Now

ದೀರ್ ಅಲ್-ಬಲಾಹ್: ಗಾಜಾ ನಗರದ ಮೇಲೆ ಇಸ್ರೇಲ್ ವೈಮಾನಿಕ​ ದಾಳಿ ಮುಂದುವರೆಸಿದೆ. ಸೋಮವಾರ ಇಲ್ಲಿನ ಬಹುಮಹಡಿ ಕಟ್ಟಡದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸೇನೆ, ಹಮಾಸ್ ವಶದಲ್ಲಿರುವ 12 ಅಂತಸ್ತಿನ ಕಟ್ಟಡದ ಮೇಲೆ ಬಾಂಬ್​ ಹಾಕಿರುವುದಾಗಿ ಮಾಹಿತಿ ನೀಡಿದೆ.

ಕಳೆದ ಕೆಲವು ದಿನಗಳಿಂದ ಗಾಜಾದಲ್ಲಿನ ಬಹು ಅಂತಸ್ತಿನ ಕಟ್ಟಡಗಳ ಮೇಲೆ ಇಸ್ರೇಲ್​ ದಾಳಿ ನಡೆಸುತ್ತಿದೆ. ದಾಳಿಗೂ ಮುನ್ನ ನಗರದ ಸುಮಾರು 10 ಲಕ್ಷ​ ನಿವಾಸಿಗಳಿಗೆ ಸ್ಥಳ ತೊರೆಯುವಂತೆ ಸೂಚಿಸಿತ್ತು. ಇನ್ನೊಂದೆಡೆ, ಗಾಜಾದಲ್ಲಿ ಭೀಕರ ಕ್ಷಾಮ ತಲೆದೋರಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಜೆರುಸೆಲಂನಲ್ಲಿ ಇಬ್ಬರು ಪ್ಯಾಲೆಸ್ತೇನಿಯನ್​ ಬಂದೂಕುಧಾರಿಗಳು ಬಸ್​ ನಿಲ್ದಾಣದಲ್ಲಿ ದಾಳಿ ನಡೆಸಿದ್ದು, ಆರು ಜನ ಸಾವನ್ನಪ್ಪಿ, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಳೆದೊಂದು ವರ್ಷದಲ್ಲಿ ಇಸ್ರೇಲ್​ನಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಈ ಘಟನೆಯ ಬೆನ್ನಲ್ಲೇ ಇಸ್ರೇಲ್​ನಾದ್ಯಂತ ಮತ್ತು ವಶಕ್ಕೆ ಪಡೆದಿರುವ ವೆಸ್ಟ್​ ಬ್ಯಾಂಕ್​ನಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್​ ನಡೆಸಿದ ದಾಳಿಯಲ್ಲಿ 65 ಜನರು ಸಾವನ್ನಪ್ಪಿದ್ದು, 320 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸೋಮವಾರ ಗಾಜಾ ನಗರದಲ್ಲಿ ಉಗ್ರರ ಗುಂಪೊಂದು ಟ್ಯಾಂಕ್‌ಗೆ ಸ್ಫೋಟಕ ಸಾಧನ ಎಸೆದ ಪರಿಣಾಮ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾನೆೆ. ಇಬ್ಬರು ಉಗ್ರರು ಗುಂಡು ಹಾರಿಸಿದ್ದಾರೆ ಎಂದು ಮಾಹಿತಿ ನೀಡಿದೆ.

WhatsApp Group Join Now
Telegram Group Join Now
Share This Article