ಹುಬ್ಬಳ್ಳಿ, ಮೇ 18: ಅಂಜಲಿ ಅಂಬಿಗೇರಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, “ನಿತ್ಯ ನಡೆಯುವ ಕೆಲಸಗಳು ನಮಗೆ ಗೊತ್ತಾಗುವುದಿಲ್ಲ” ಎಂದು ಹೇಳುವ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ವಿರಾಪುರ ಓಣಿಯಲ್ಲಿರುವ ಕೊಲೆಯಾದ ಅಂಜಲಿ ಅಂಬಿಗೇರ (21) ಮನೆಗೆ ಸಚಿವ ಸಂತೋಷ ಲಾಡ್ ಮತ್ತು ಶಾಸಕ ಪ್ರಸಾದ್ ಅಬ್ಬಯ್ಯ ಇಂದು (ಮೇ 18) ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ, ಸಚಿವ ಸಂತೋಷ್ ಲಾಡ್, ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಬೇಕು ಅಂತ ಮನವಿ ಮಾಡುತ್ತೇನೆ ಎಂದರು.
ನೇಹಾ ಹತ್ಯೆ ನಡೆದ ನಂತರ ಇನ್ನೊಂದು ಘಟನೆ ನಡೆದಿದೆ. ಸಮಾಜದಲ್ಲಿ ಇದು ಒಳ್ಳೆಯದಲ್ಲ. ಅದರಲ್ಲೂ ಹುಬ್ಬಳ್ಳಿ-ಧಾರವಾಡದಲ್ಲಂತೂ ಒಳ್ಳೆಯದಲ್ಲ. ಅಹಿತಕರ ಘಟನೆಗಳು ನಡೆದಾಗ ತಕ್ಷಣಕ್ಕೆ ಕಡಿವಾಣ ಹಾಕುವುದು ಪೋಲಿಸರ ಕರ್ತವ್ಯ. ಅಹಿತಕರ ಚಟುವಟಿಕೆಗಳಲ್ಲಿ ಯುವಕರು ಬಲಿಯಾಗ್ತಿದ್ದಾರೆ. ಇಂಥ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪ್ರಕರಣವನ್ನು ಸಿಐಡಿಗೆ ನೀಡಬೇಕು ಅಂತ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.
ಆರೋಪಿ ವಿಶ್ವನ ವಿರುದ್ಧ ಅಂಜಲಿ ಪೋಷಕರು ಮೊದಲೆ ದೂರು ಕೊಟ್ಟಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ. ಹೀಗಾಗಿ ಈಗಾಗಲೆ ಕ್ರಮ ಆಗಿದೆ. ಈಗಾಗಲೆ ಅಂಜಲಿ ಹತ್ಯೆ ತನಿಖೆ ನಡೆಯುತ್ತದೆ. ಗೃಹ ಸಚಿವರು ಬಂದು ಈ ಕುರಿತು ಮಾತಾನಾಡುತ್ತಾರೆ. ಇನ್ಮುಂದೆ ಇಂತಹ ಅಹಿತಕರ ಘಟನೆ ನಡೆದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಮಾತನಾಡಿದರು.