ರಾಯಬಾಗ : ತಾಲೂಕಿನ ಬೆಂಡವಾಡ ವಲಯದ ಬಂಡಿತೋಟ ಕಾರ್ಯಕ್ಷೇತ್ರದ ಚಿತ್ತಾರ ಜ್ಞಾನವಿಕಾಸ ಕೇಂದ್ರ ಸಭೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,
ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕರಾದ ಈರಪ್ಪ ದಾಸ್ತಿಕೊಪ್ಪ ಅವರು ದ್ವೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ನಂತರ ಪ್ರಾಸ್ತಾವಿಕವಾಗಿ ಈರಪ್ಪ ದಾಸ್ತಿಕೊಪ್ಪ ಅವರು ಎಲ್ಲಾ ತಾಯಂದಿರಿಗೆ ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು, ಸಭೆಯಲ್ಲಿ ಒಕ್ಕೂಟ ಅಧ್ಯಕ್ಷರಾದ ಸುರೇಖಾ ಪಾಟೀಲ್ ಅವರು ಪೂಜ್ಯ ದಂಪತಿಗಳು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಹೆಮ್ಮೆಯ ವಿಚಾರವೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಜ್ಞಾನ ವಿಕಾಸ್ ಸಮನ್ವಯಾಧಿಕಾರಿಯವರಾದ ಸುರೇಖಾ ಹೆಬ್ಬಳ್ಳಿ ಅವರು ಎಲ್ಲ ಸದಸ್ಯರಿಗೆ ಆಟವಾಡಿಸಿ ಬಹುಮಾನ ವಿತರಣೆ ಮಾಡಲಾಯಿತು ಸಭೆಯಲ್ಲಿ ಸೇವಾಪ್ರತಿನಿಧಿಯವರಾದ ರೇಣುಕಾ ಬಂಡಿ, ಮಾಯಾ, ಪ್ರಶಾಂತ್,ಎಲ್ಲ ಸದಸ್ಯರು ಉಪಸ್ಥಿತರಿದ್ದು ಸಂತೋಷಪಟ್ಟರು.