ಐಪಿಎಲ್ 2025- ದ್ವಿತೀಯಾರ್ಧ ವೇಳಾಪಟ್ಟಿ ಪ್ರಕಟ

Hasiru Kranti
ಐಪಿಎಲ್ 2025- ದ್ವಿತೀಯಾರ್ಧ ವೇಳಾಪಟ್ಟಿ ಪ್ರಕಟ
WhatsApp Group Join Now
Telegram Group Join Now

ನವದೆಹಲಿ ಮೇ., ೧೩- ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ 2025 ರ ಐಪಿಎಲ್ (IPL 2025 ) ಅರ್ಧಕ್ಕೆ ನಿಂತಿತ್ತು. ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆರಿಸಿದ್ದರಿಂದ  ಮೇ 8 ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಯಿತು.  ಐಪಿಎಲ್  ಅನ್ನು ಒಂದು ವಾರ ಮುಂದೂಡಿರುವುದಾಗಿ ಬಿಸಿಸಿಐ (BCCI) ಮೇ 9 ರಂದು ಘೋಷಿಸಿತ್ತು. ಈಗ ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾದ ಕಾರಣ ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮೇ 17 ರಿಂದ ಐಪಿಎಲ್‌ ೨೦೨೫ರ ಉಳಿದ ಪಂದ್ಯಗಳನ್ನು ನಡೆಸಲು ದಿನಾಂಕ ಘೋಷಣೆ ಮಾಡಿರುವ ಬಿಸಿಸಿಐ ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಸಲು ತಿರ್ಮಾನಿಸಿದೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಅವಧಿಯಲ್ಲಿ, ಉಳಿದ ಲೀಗ್ ಪಂದ್ಯಗಳನ್ನು ಮೇ 17 ರಿಂದ ಮೇ 25 ರವರೆಗೆ ಆಡಲಾಗುವುದು, ಇದರಲ್ಲಿ 2 ಡಬಲ್ ಹೆಡರ್‌ ಪಂದ್ಯಗಳು ಸೇರಿವೆ. ಅಂದರೆ ಒಂದೇ ದಿನ 2 ಪಂದ್ಯಗಳು ನಡೆಯಲಿದ್ದು, ಈ  ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ನಡೆಸಲು ತೀರ್ಮಾನಿಸಲಾಗಿದೆ.  ಇದಲ್ಲದೆ, ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ.

ಐಪಿಎಲ್ ಪತ್ರಿಕಾ ಪ್ರಕಟಣೆ :-

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಐಪಿಎಲ್, ‘ಟಾಟಾ ಐಪಿಎಲ್ 2025 ಪುನರಾರಂಭವನ್ನು ಘೋಷಿಸಲು ಬಿಸಿಸಿಐ ಸಂತೋಷಪಡುತ್ತಿದೆ. ಐಪಿಎಲ್ ದ್ವಿತೀಯಾರ್ಧ ಮೇ 17 ರಿಂದ ಪ್ರಾರಂಭವಾಗಿ ಜೂನ್ 3 ರಂದು ನಡೆಯುವ ಫೈನಲ್‌ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹೊಸ ವೇಳಾಪಟ್ಟಿಯಲ್ಲಿ ಎರಡು ಡಬಲ್-ಹೆಡರ್‌ಗಳು ಸೇರಿವೆ. ಪ್ಲೇಆಫ್ ಪಂದ್ಯಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದ್ದು, ಕ್ವಾಲಿಫೈಯರ್ 1 – ಮೇ 29 ರಂದು, ಎಲಿಮಿನೇಟರ್ – ಮೇ 30 ರಂದು, ಕ್ವಾಲಿಫೈಯರ್ 2 – ಜೂನ್ 1 ರಂದು ಮತ್ತು ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ನಂತರ ಘೋಷಿಸಲಾಗುವುದು. ಕ್ರಿಕೆಟ್ ಸುರಕ್ಷಿತವಾಗಿ ಮರಳಲು ಕಾರಣರಾದ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಮತ್ತೊಮ್ಮೆ ನಮನ ಸಲ್ಲಿಸಲು ಬಿಸಿಸಿಐ ಈ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ತಿಳಿಸಿದೆ.

ಉಳಿದ ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ಇಂತಿದೆ :-

ದಿನಾಂಕ ಮುಖಾಮುಖಿ ಸಮಯ ಸ್ಥಳ
17-05-2025 ಆರ್​ಸಿಬಿ vs ಕೆಕೆಆರ್ ಸಂಜೆ 7:30 ಬೆಂಗಳೂರು
18-05-2025 ರಾಜಸ್ಥಾನ vs ಪಂಜಾಬ್ ಮಧ್ಯಾಹ್ನ 3:30 ಜೈಪುರ
18-05-2025 ಡೆಲ್ಲಿ vs ಗುಜರಾತ್ ಸಂಜೆ 7:30 ದೆಹಲಿ
19-05-2025 ಲಕ್ನೋ vs ಹೈದರಾಬಾದ್ ಸಂಜೆ 7:30 ಲಕ್ನೋ
20-05-2025 ಸಿಎಸ್​ಕೆ vs ರಾಜಸ್ಥಾನ್ ಸಂಜೆ 7:30 ದೆಹಲಿ
21-05-2025 ಮುಂಬೈ vs ಡೆಲ್ಲಿ ಸಂಜೆ 7:30 ಮುಂಬೈ
22-05-2025 ಗುಜರಾತ್ vs ಲಕ್ನೋ ಸಂಜೆ 7:30 ಅಹಮದಾಬಾದ್
23-05-2025 ಆರ್​ಸಿಬಿ vs ಹೈದರಾಬಾದ್ ಸಂಜೆ 7:30 ಬೆಂಗಳೂರು
24-05-2025 ಪಂಜಾಬ್ vs ಡೆಲ್ಲಿ ಸಂಜೆ 7:30 ಜೈಪುರ
25-05-2025 ಗುಜರಾತ್ vs ಸಿಎಸ್​ಕೆ ಮಧ್ಯಾಹ್ನ 3:30 ಅಹಮದಾಬಾದ್
25-05-2025 ಹೈದರಾಬಾದ್ vs ಕೋಲ್ಕತ್ತಾ ಸಂಜೆ 7:30 ದೆಹಲಿ
26-05-2025 ಪಂಜಾಬ್ vs ಮುಂಬೈ ಸಂಜೆ 7:30 ಜೈಪುರ
27-05-2025 ಲಕ್ನೋ vs ಆರ್​ಸಿಬಿ ಸಂಜೆ 7:30 ಲಕ್ನೋ
29-05-2025 ಕ್ವಾಲಿಫೈಯರ್ 1 ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
30-05-2025 ಎಲಿಮಿನೇಟರ್ ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
01-06-2025 ಕ್ವಾಲಿಫೈಯರ್ 2 ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
03-06-2025 ಫೈನಲ್ ಪಂದ್ಯ ಸಂಜೆ 7:30 ಸ್ಥಳ ನಿಗದಿ ಪಡಿಸಿಲ್ಲ
WhatsApp Group Join Now
Telegram Group Join Now
Share This Article