ಬಳ್ಳಾರಿ,ಆ.05 ಜಿಲ್ಲೆಯ ಕೆಲವು ಸಹಕಾರ ಸಂಘಗಳು ತಮ್ಮ ಉದ್ದೇಶಿತ ಕಾರ್ಯಚಟುವಟಿಕೆಗಳನ್ನು ನಿರ್ವಹಿಸದೇ ಸ್ಥಗಿತಗೊಂಡಿದ್ದು, ಆ ಸಂಘಗಳನ್ನು ಸಮಾಪನೆಗೊಳಿಸಲಾಗುವುದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
ಸಹಕಾರ ಸಂಘಗಳನ್ನು ಏಕೆ ಸಮಾಪನೆಗೊಳಿಸಬಾರದು ಎಂಬುವುದಕ್ಕೆ ಪ್ರಕಟಣೆಗೊಂಡ 07 ದಿನಗಳೊಳಗಾಗಿ ಸಂಘಗಳ ಕಾರ್ಯದರ್ಶಿ, ಸದಸ್ಯರಿಂದ ಅಥವಾ ಯಾರಿಂದಲಾದರೂ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಈ ಕಚೇರಿಗೆ ಸಲ್ಲಿಸಬೇಕು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿಯ ಶ್ರೀ ಬೆಟ್ಟದ ಮಲ್ಲೇಶ್ವರ ಗೃಹ ನಿರ್ಮಾಣ ಸಹಕಾರ ಸಂಘ ನಿ., ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಕೂಡ್ಲಿಗಿ ತಾಲ್ಲೂಕಿನ ಹುಡೇಂನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹತ್ತಿ ಉಣ್ಣೆ ಕೈಮಗ್ಗ ನೇಕಾರರ ಸಹಕಾರ ಸಂಘ ನಿ., ಹೊಸಹಳ್ಳಿಯ ಶ್ರೀ ಗಜಾನನ ರೇಷ್ಮೆ ಕೈಮಗ್ಗ ನೇಕಾರರ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘ ನಿ., ಕೂಡ್ಲಿಗಿಯ ಶಿವಪುರ ಹತ್ತಿ ಉಣ್ಣೆ ಕೈಮಗ್ಗ ನೇಕಾರರ ಸಹಕಾರ ಸಂಘ ನಿ., ಕೊಟ್ಟೂರು ತಾಲ್ಲೂಕಿನ ರಾಂಪುರದ ಶ್ರೀ ಸಾಲೇಶ್ವರ ರೇಷ್ಮೆ ಮತ್ತು ಹತ್ತಿ ಕೈಮಗ್ಗ ನೇಕಾರರ ಉತ್ಪತ್ತಿ ಮಾರಾಟ ಸಹಕಾರ ಸಂಘ ನಿ., ನಿಂಬಳಗೇರಿಯ ಶ್ರೀ ಚೌಡೇಶ್ವರಿ ಮಹಿಳಾ ವಿವಿದೋದ್ಧೇಶ ಕೈಗಾರಿಕಾ ಸಹಕಾರ ಸಹಕಾರ ಸಂಘ ನಿ., ಕೊಟ್ಟೂರು ಕೋಳಿ ಸಾಕಾಣಿಕೆದಾರರ ಮತ್ತು ಮಾರಾಟಗಾರರ ಸಹಕಾರ ಸಂಘ ನಿಯಮಿತ. ತಪ್ಪಿದಲ್ಲಿ ಸಹಕಾರ ಸಂಘಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 72(2) ರನ್ವಯ ಸಮಾಪನೆಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ