ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಆಹ್ವಾನ

Ravi Talawar
ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಗೆ ಆಹ್ವಾನ
WhatsApp Group Join Now
Telegram Group Join Now

ಕರ್ನಾಟಕಕ್ಕೆ ೫೦ ಸಂಭ್ರಮ. ಹೆಸರಾಯಿತು ಕರ್ನಾಟಕ. ಉಸಿರಾಗಲಿ ಕನ್ನಡ. ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ತನ್ನ ಆರನೆ
ವಾರ್ಷಿಕೊತ್ಸವ ನಿಮಿತ್ತವಾಗಿ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ಹೋರಾಟ, ಆಡಳಿತ, ಮಾಧ್ಯಮ, ಸಂಘ ಸಂಸ್ಥೆ, ಸಂಘಟನೆಗಳ ಮೂಲಕ ಮಾಡುತ್ತಿರುವ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸಾಂಸ್ಕೃತಿ ರತ್ನ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲು ನಿರ್ಧಾರ ಮಾಡಿದೆ.

ಜಾನಪದ ಸಾಹಿತ್ಯ ಕಲೆ, ನಾಟಕ, ರಂಗಭೂಮಿ ಕಲೆ, ಸಂಗೀತ, ಆಡಳಿತದಲ್ಲಿ ಕನ್ನಡ ಸೇವೆ, ಮಾಧ್ಯಮದಲ್ಲಿ ಕನ್ನಡ
ಸೇವೆ, ಸಂಘ ಸಂಸ್ಥೆಗಳ ಮೂಲಕ ಮಾಡುತ್ತಿರುವ ಕನ್ನಡ ಸೇವೆ ಕನ್ನಡಕ್ಕಾಗಿ ವೈಯಕ್ತಿಕ ಸಾಧನೆ, ವಿವಿಧ
ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಆಗ್ರಶ್ರೇಣಿಯಲ್ಲಿ ಉತ್ತಿರ್ಣರಾಗಿರುವವರು, ಚಿತ್ರಕಲೆ, ವಿಶೇಷ ಚೇತನರ ಸೇವೆ,
ಮಹಿಳಾ ಮತ್ತು ಮಕ್ಕಳ ಸೇವೆ, ಕೃಷಿ, ಕೈಗಾರಿಕೆ, ಸ್ವಯಂ ಉದ್ಯೋಗ, ತೋಟಗಾರಿಕೆ, ಹಾಗೂ ವಿವಿಧ ಸರ್ಕಾರಿ ಸೇವೆ ಮೂಲಕ
ಮಾಡುತ್ತಿರುವ ಕನ್ನಡ ಸೇವೆಯನ್ನು, ದೇಶದ ವಿವಿಧ ರಾಜ್ಯಗಳಲ್ಲಿ ಮಾಡುತ್ತಿರುವ ಕನ್ನಡ ಸೇವೆಯನ್ನು ಪರಿಗಣಿಸಿ
ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ
ಅಧ್ಯಕ್ಷರಾದ ಡಾ. ಸುಬ್ಬಣ್ಣ ಕರಕನಳ್ಳಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸೇವೆ ಮತ್ತು ಸಾಧನೆ ಮಾಡಿರುವ ದಾಖಲಾತಿಗಳೊಂದಿಗೆ, ಸಂಕ್ಷಿಪ್ತ ಮಾಹಿತಿ ಎರಡು ಭಾವಚಿತ್ರಗಳೊಂದಿಗೆ, ೨೦-೬-೨೦೨೪ ರಂದು ಪಿ ಡಿ ಎಫ ಮೂಲಕ ೯೯೦೧೬೧೨೧೩೯ ಸಂಖ್ಯೆಗೆ ಅಥವಾ,೧೭-೪-೩೧೮/೨, (ಸಿಎಂಸಿ) ನಗರ ಸಭೆ
ಕಾಲೋನಿ, ವಿಶ್ವ ಶಾಂತಿ ಬುದ್ಧ ವಿಹಾರ, ಮೈಲೂರು ಬೀದರ ೫೮೫೪೦೩. ವಿಳಾಸಕ್ಕೆ ಅಂಚೆ ಮೂಲಕ ಕಳಿಸಲು ಕೊರಲಾಗಿದೆ. ಪೂಜ್ಯ ಡಾ. ಚನ್ನ ಬಸವ ಪಟ್ಟದೇವರು ಜಿಲ್ಲಾ ರಂಗಮಂದಿರ ಬೀದರ ನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು.

 

WhatsApp Group Join Now
Telegram Group Join Now
Share This Article