ಬೆಳಗಾವಿ: ಹಿರಿಯ ನಾಗರಿಕರ ಬದುಕಿನ ಅನುಭವಗಳನ್ನು ಕೃತಿಯಲ್ಲಿ ದಾಖಲಿಸಲು ಲೇಖನಗಳನ್ನು ಆಹ್ವಾನಿಸಲಾಗಿದೆ. ನೋವು, ನಲಿವು ಪ್ರಸಂಗ, ಕಾಳಜಿ, ನಿಷ್ಕಾಳಜಿ, ಜವಾಬ್ದಾರಿ, ಸಲಹೆ, ಸೇರಿದಂತೆ ಮನೆ, ಸ್ನೇಹಬಳಗ, ಬಂಧುಬಳಗ, ಕಚೇರಿ, ಹೀಗೆ ಎಲ್ಲಕಡೆಗೂ ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು 350 ಪದಗಳಿಗೆ ಮೀರದಂತೆ ಲೇಖನವನ್ನು ಡಿಟಿಪಿ ತಂತ್ರಾಂಶದಲ್ಲಿ ಟೈಪ್‌ಮಾಡಿ ಈ ಮೇಲ್ ವಿಳಾಸ [email protected] ಕ್ಕೆ ಕಳುಹಿಸಿ. ಅಥವ ಬರೆದು ಅಂಚೆ ಮೂಲಕ ಡಾ.ಕೊಳ್ಚಪ್ಪೆ ಗೋವಿಂದ ಭಟ್ 302, ಹ್ಯಾಟ್ ಹಿಲ್ ಕ್ರೆಸ್ಟ್ ಅಪಾರ್ಟ್‌ಮೆಂಟ್ಸ್, ಮೂರನೇ ಅಡ್ಡರಸ್ತೆ, ಹಾಟ್ ಹಿಲ್ ರಸ್ತೆ ಚಿಲಿಂಬಿ, ಅಶೋಕ ನಗರ ಮಂಗಳೂರು 575006 ವಿಳಾಸಕ್ಕೆ ಕಳುಹಿಸಿ ಹೆಚ್ಚಿನ ಮಾಹಿತಿಗಾಗಿ 7045353049 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.ನೀವು ಕಳುಹಿಸುವ ಲೇಖನಗಳನ್ನು ಹಿರಿಯ ನಾಗರಿಕರ ಅನುಭವ ಮತ್ತು ನೋವು-ನಲಿವು ಎಂಬ ಸಂಪಾದಿತ ಕೃತಿಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.