ರಾಜ್ಯಕ್ಕೆ 6.2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ: 40 ಸಾವಿರ ಉದ್ಯೋಗ ನಿರೀಕ್ಷೆ

Ravi Talawar
ರಾಜ್ಯಕ್ಕೆ 6.2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ: 40 ಸಾವಿರ ಉದ್ಯೋಗ ನಿರೀಕ್ಷೆ
WhatsApp Group Join Now
Telegram Group Join Now

ಬೆಂಗಳೂರು, ಜೂನ್ 26: ವಿದೇಶಗಳಲ್ಲಿ ಕರ್ನಾಕದ ಸ್ಟಾರ್ಟಪ್  ಹಾಗೂ ಕಂಪನಿಗಳಿಗೆ ಹೂಡಿಕೆ ಸೆಳೆಲು ಮಾಡಿರುವ ರೋಡ್​​ ಶೋಗಳ ಪರಿಣಾಮ ಇದೀಗ 6.2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ರಾಜ್ಯ ನಿರೀಕ್ಷಿಸುತ್ತಿದೆ. ಪರಿಣಾಮವಾಗಿ 35,000 ದಿಂದ 40,000 ಉದ್ಯೋಗ ಸೃಷ್ಟಿಯ ಭರವಸೆಯೂ ಮೂಡಿದೆ ಎಂದು ವರದಿಯಾಗಿದೆ. ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ (ಯುಕೆ), ಫ್ರಾನ್ಸ್ ಮತ್ತು ಜರ್ಮನಿಯ ಹಲವಾರು ನಗರಗಳಲ್ಲಿ ರೋಡ್‌ಶೋಗಳನ್ನು ನಡೆಸಲಾಗಿತ್ತು.

ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಅಧಿಕಾರಿಗಳು ಜೂನ್ ಮಧ್ಯ ಭಾಗದಲ್ಲಿ ರೋಡ್‌ಶೋಗಳ ಮೂಲಕ ವಿವಿಧ ದೇಶಗಳೊಂದಿಗೆ ಹೊಸದಾಗಿ ಸಹಯೋಗವನ್ನು ಬೆಳೆಸಲು ಹಲವಾರು ನಗರಗಳಿಗೆ ಭೇಟಿ ನೀಡಿದ್ದರು.

6.2 ಬಿಲಿಯನ್ ಡಾಲರ್ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಉದ್ದೇಶಿತ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ರಾಜ್ಯದಲ್ಲಿ 35,000-40,000 ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರೋಡ್‌ಶೋಗಳ ಮುಖ್ಯ ಉದ್ದೇಶಗಳು ಕರ್ನಾಟಕದ ಜೈವಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯನ್ನು ವಿದೇಶಗಳಲ್ಲಿ ಪರಿಚಯಿಸುವುದಾಗಿದೆ. ಅದರ ಮೂಲಸೌಕರ್ಯ ಮತ್ತು ನೀತಿಗಳನ್ನು ಅಮೆರಿಕ ಮತ್ತು ಇತರ ದೇಶಗಳ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಪರಿಚಯಿಸುವುದಾಗಿದೆ. ಇದರಿಂದ ರಾಜ್ಯದಲ್ಲಿ ವಿದೇಶಿ ಹೂಡಿಕೆ ಹರಿದುಬರಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ನಾವು ಯುರೋಪ್ ಮತ್ತು ಅಮೆರಿಕದಿಂದ ಬಯೋಟೆಕ್, ಸೆಮಿಕಂಡಕ್ಟರ್, ಎಐ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article