ಯೋಗಾಸನದ ಹೆಸರು: ಸರ್ಪಾಸನ (ಸರ್ಪ ಅಂದರೆ ಹಾವು)
ಅಭ್ಯಾಸದ ವಿಧಾನ: ಬೋರಲಾಗಿ ಮಲಗಿ. ಗದ್ದವು ನೆಲಕ್ಕೆ ತಾಗಿರಲಿ. ಪಾದಗಳು ಜೋಡಿಸಿರಲಿ. ಹೆಬ್ಬೆರಳು ಪರಸ್ಪರ ಅಂಟಿಕೊಂಡಿರಲಿ. ಹಸ್ತಗಳನ್ನು ಭುಜದ ಪಕ್ಕಕ್ಕೆ ಇರಿಸಿ. ಬೆರಳುಗಳು ಮುಂದಕ್ಕೆ ಚಾಚಿರಲಿ. ಉಚ್ಛವಾಸದೊಂದಿಗೆ ದೇಹದ ಮೇಲ್ಭಾಗವನ್ನು ನಾಭಿಯವರೆಗೆ ಮೇಲಕ್ಕೆ ಎತ್ತಿರಿ. ನಿಮ್ಮ ಬಲಗಾಲನ್ನು ಬಲಗಡೆಗೆ ಸಾಧ್ಯವಾದ? ದೂರ ಸರಿಸಬೇಕು. ಮಂಡಿಯು ನೆಲದ ಮೇಲಿರಲಿ. ಮಂಡಿ, ಕಾಲುಗಳು ಮತ್ತು ಸೊಂಟದಲ್ಲಾಗುವ ಸೆಳೆತವನ್ನು ಅನುಭವಿಸಿ. ವಿಶ್ವಾಸದೊಂದಿಗೆ ನಿಮ್ಮ ಕುತ್ತಿಗೆಯನ್ನು ಬಲಕ್ಕೆ ಹೊರಳಿಸಿ ಹಿಂದೆ ತಿರುಗಿ ನಿಮ್ಮ ಪಾದವನ್ನು ನೋಡಲು ಪ್ರಯತ್ನಿಸಿ. ಕೆಲವು ಕ್ಷಣಗಳು ಈ ಬಂಗಿಯಲ್ಲಿ ಬಿಗಿಯಾಗಿರಲಿ. ಉಚ್ಛವಾಸದೊಂದಿಗೆ ದೇಹದ ಮೇಲ್ಭಾಗವನ್ನು ಮುಂದಕ್ಕೆ ತಿರುಗಿಸಿ. ನಿಶ್ವಾಸದೊಂದಿಗೆ ಪಾದಗಳನ್ನು ಜೋಡಿಸಿ ಗದ್ದವನ ನೆಲಕ್ಕೆ ತಾಗಿಸಿ ಪ್ರಾರಂಭಿಕ ಸ್ಥಿತಿಗೆ ಬನ್ನಿ. ಇನ್ನೊಂದು ಕಡೆಯಲ್ಲಿ ಈ ಕ್ರಮವನ್ನು ಪುನರಾವರ್ತಿಸಿ. ನಂತರ ವಿಶ್ರಾಂತಿ ಪಡೆಯಿರಿ.
ಪ್ರಯೋಜನಗಳು: ಮೂತ್ರಪಿಂಡಗಳು, ಯಕೃತ್ತು, ಮೆದೋಜೀರಕ ಗ್ರಂಥಿ, ಹೊಟ್ಟೆಯ ಸ್ನಾಯುಗಳು ಮತ್ತು ಕರುಳಿಗೆ ಶಕ್ತಿಯನ್ನು ತುಂಬುತ್ತದೆ. ಬೆನ್ನೆಲುಬು, ಬೆನ್ನಿನ ಸ್ನಾಯುಗಳು, ಕಟ್ಟಿಗೆ ನರ ಮತ್ತು ಕೈಗಳನ್ನು ಬಲಿ?ವಾಗಿಸುತ್ತದೆ. ಕುತ್ತಿಗೆ ಭುಜದ ಸ್ನಾಯುಗಳು ಮತ್ತು ಸೊಂಟ ಪ್ರದೇಶದಲ್ಲಿರುವ ಸೆಳೆತದಿಂದ ವಿಮೋಚನೆಗೊಳಿಸುತ್ತದೆ.
ಎಚ್ಚರಿಕೆ: ಕುತ್ತಿಗೆ, ಭುಜ, ಬೆನ್ನು ಮತ್ತು ಎದೆಯ ಭಾಗದಲ್ಲಿ ತೊಂದರೆಯಿರುವವರು ಎಚ್ಚರಿಕೆಯಿಂದ ಮಾಡಬೇಕು.